ಬೆಂಗಳೂರು: ಶಿವಮೊಗ್ಗದಿಂದ ಸ್ಪರ್ಧೆ ಮಾಡಿದ್ದ ಗೀತಾ ಶಿವರಾಜಕುಮಾರ್ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರು. ಈ ಹಿನ್ನೆಲೆ ಶಿವರಾಜ್ ಕುಮಾರ್ ವಿರುದ್ಧ ಕುಮಾರ ಬಂಗಾರಪ್ಪ ಲೇವಡಿ ಮಾಡಿದ್ದರು. ಇದರಿಂದ ಕೆಂಡಕಾರಿದ ಶಿವಣ್ಣ ಫ್ಯಾನ್ಸ್ ಇಂದು ಕುಮಾರ ಬಂಗಾರಪ್ಪ ಮನೆ ಮೇಲೆ ಮುತ್ತಿಗೆಗೆ ಯತ್ನಿಸಿದ್ದಾರೆ.
ಗೀತಾ ಶಿವರಾಜಕುಮಾರ್ ಲೋಕಸಭಾ ಚುನಾವಣೆ ಸೋಲಿನ ಬಳಿಕ ಕುಮಾರ ಬಂಗಾರಪ್ಪ ಟೀಕೆ ಮಾಡಿದ್ದರು. ಶಿವರಾಜ್ ಕುಮಾರ್ ನಿರುದ್ಯೋಗಿ ಆಗಬೇಕಿಲ್ಲ. ನಮ್ಮೂರ ಜಾತ್ರೆಯಲ್ಲಿ ಕುಣಿಯಲು ಅರ್ಜಿ ಹಾಕಿಕೊಳ್ಳಬಹುದು ಎಂದಿದ್ದರು. ಈ ಹಿನ್ನೆಲೆ ಹೇಳಿಕೆ ಖಂಡಿಸಿ ಶಿವರಾಜ್ ಕುಮಾರ್ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದ್ದು, ಕುಮಾರ್ ಬಂಗಾರಪ್ಪ ಕೂಡಲೇ ಶಿವಣ್ಣ ಅವರ ಬಳಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.