ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ಹಿನ್ನೆಲೆ, ಕೇಜ್ರಿವಾಲ್ ಅವರ ಹೆಚ್ಚಿನ ಕಸ್ಟಡಿ ವಿಚಾರಣೆಗೆ ಇಡಿ ಸಲ್ಲಿಸಿರುವ ಅರ್ಜಿ ಕುರಿತ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರ ನ್ಯಾಯಾಲಯಕ್ಕೆ ಕೇಜ್ರಿವಾಲ್ ಅವರನ್ನು ಹಾಜರುಪಡಿಸಿ 7 ದಿನಗಳ ಹೆಚ್ಚಿನ ಕಸ್ಟಡಿಗೆ ಇಡಿ ಮನವಿ ಮಾಡಿತು. ಈ ವೇಳೆ ಪ್ರಕರಣದೊಂದಿಗೆ ಸಂಬಂಧ ಹೊಂದಿರುವ ಕೆಲವು ಜನರನ್ನು ವಿಚಾರಣೆಗೆ ಮಾಡಬೇಕಿದೆ ಅಂತ ಕೋರ್ಟ್ ಗೆ ಇಡಿ ಹೇಳಿತು. ದೆಹಲಿಯ ರೂಸ್ ಅವೆನ್ಯೂ ಕೋರ್ಟ್ನಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಜಾರಿ ನಿರ್ದೇಶನಾಲಯದ ಏಳು ದಿನಗಳ ಅವಧಿ ಅಂತ್ಯಗೊಂಡಿದೆ. ಆಡಳಿತಾರೂಢ ಬಿಜೆಪಿ ತಮ್ಮ ಪಕ್ಷವನ್ನು “ವಿಭಜನೆ” ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.”ಇದೊಂದು ರಾಜಕೀಯ ಪಿತೂರಿ, ಜನರೇ ಉತ್ತರ ನೀಡುತ್ತಾರೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.