ಹೈದರಾಬಾದ್: ತೆಲುಗು ದೇಶಂ ಪಕ್ಷದ ನಾರಾ ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಿ ಮತ್ತೆ ಗದ್ದುಗೆ ಏರಲು ಸಜ್ಜಾಗಿದ್ದಾರೆ. ಇದೇ ಜೂನ್ 12 ರಂದು ಸಂಜೆ 4.55 ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಟಿಡಿಪಿ ನಾಯಕ ಕೆ ರಘು ರಾಮ ಕೃಷ್ಣರಾಜು ತಿಳಿಸಿದ್ದಾರೆ. ಭಾನುವಾರ ಸಂಜೆ ಪ್ರಧಾನಿ ಆಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬುಧವಾರ ಸಂಜೆ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ.
ಆಂಧ್ರಪ್ರದೇಶ ಜನತೆಗೆ ಇದು ಅತ್ಯಂತ ಸಂತಸದ ಕ್ಷಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೌತ್ ನಾಯಕರಾದ ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಅವರನ್ನು ಶ್ಲಾಘಿಸಿದ್ದಾರೆ. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಯಿಂದ ಉಂಟಾದ ವಿನಾಶವನ್ನು ಪರಿಗಣಿಸಿ ಖಂಡಿತವಾಗಿಯೂ ನಮಗೆ ಕೇಂದ್ರದಿಂದ ಸಾಕಷ್ಟು ಬೆಂಬಲ ಬೇಕು ಎಂದು ಕೆ ರಘು ರಾಮ ಕೃಷ್ಣರಾಜು ಹೇಳಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್, ನನ್ನ ತಂದೆ ಮೋದಿ ಸರ್ಕಾರಕ್ಕೆ ಯಾವುದೇ ಬೇಡಿಕೆಗಳನ್ನು ಇಟ್ಟಿಲ್ಲ. ನಮ್ಮದು ಬೇಷರತ್ ಬೆಂಬಲ ಎಂದು ಸ್ಪಷ್ಟನೆ ನೀಡಿದರು. ಮುಂದಿನ ಐದು ವರ್ಷಗಳಲ್ಲಿ ಕಳೆದ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವತ್ತ ತಮ್ಮ ಗಮನವನ್ನು ಹೊಂದಿದೆ ಎಂದು ಹೇಳಿದರು. ನಮ್ಮ ಬೆಂಬಲ ಬೇಷರತ್ತಾಗಿದೆ. ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದಂತೆ, 2014 ರಲ್ಲಿ ಆಂಧ್ರಪ್ರದೇಶದ ರಾಜ್ಯವು ಆಂಧ್ರಪ್ರದೇಶದ ಜನರ ಬಹುಮತದ ದೃಷ್ಟಿಕೋನಕ್ಕೆ ವಿರುದ್ಧವಾಗಿ ವಿಭಜಿಸಲ್ಪಟ್ಟಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು.
ಹೈದರಾಬಾದ್ ಅನ್ನು ಕಳೆದುಕೊಂಡಿರುವುದು ನಷ್ಟಕ್ಕೆ ಒಂದು ಪ್ರಮುಖ ಕಾರಣವಾಗಿದೆ. .ಹೈದರಾಬಾದ್ ಆರ್ಥಿಕ ಶಕ್ತಿ ಕೇಂದ್ರವಾಗಿದೆ, ಹೆಚ್ಚಿನ ಜನರು ಅದನ್ನು ಅವಲಂಬಿಸಿದ್ದಾರೆ. ರಾಜ್ಯಕ್ಕೆ ಹೂಡಿಕೆಗಳು ಬರುವಂತಹ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಆದ್ಯತೆ. ಏಕೆಂದರೆ ನಮ್ಮ ಪ್ರಣಾಳಿಕೆಯ ಮೊದಲ ಭರವಸೆಯೆಂದರೆ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು. ಅದಕ್ಕಾಗಿ ನಾವು ಸಾಕಷ್ಟು ಹೂಡಿಕೆಗಳನ್ನು ತರಬೇಕಾಗಿದೆ ಎಂದು ನಾರಾ ಲೋಕೇಶ್ ತಿಳಿಸಿದ್ದಾರೆ.