ಮೈಸೂರು: ಮದುವೆ ಆಗ್ತೀನಿ ಅಂತ ನಂಬಿಸಿ ವಿಚ್ಛೇದಿತ ಮಹಿಳೆಯನ್ನು ಯುವಕನೊಬ್ಬ ಲೈಂಗಿಕವಾಗಿ ಬಳಸಿಕೊಂಡ ಆರೋಪವೊಂದು ಕೇಳಿ ಬಂದಿದೆ. ಮೈಸೂರಿನ ಬೋಗಾದಿಯ ಬ್ಯಾಂಕರ್ಸ್ ಕಾಲೋನಿಯ ಮಹಿಳೆಗೆ ಯುವಕನಿಂದ ವಂಚನೆಗೆ ಒಳಗಾಗಿದ್ದಾರೆ. ವಂಚನೆಗೆ ಒಳಗಾದ 34 ವರ್ಷದ ಮಹಿಳೆ ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಳು. ಗಂಡನಿಂದ ವಿಚ್ಛೇದನ ಪಡೆದಿದ್ದ ಮಹಿಳೆ ಸ್ವತಂತ್ರವಾಗಿ ಬದುಕುತ್ತಿದ್ದಳು.
ಈ ಮಹಿಳೆಯ ಬಾಳಲ್ಲಿ ಹರೀಶ ಎಂ ಎನ್ನುವ 25 ವರ್ಷದ ಯುವಕನ ಆಗಮನವಾಗಿದೆ. ಈತ ಮಹಿಳೆಯನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಗರ್ಭಿಣಿ ಮಾಡಿ ಪರಾರಿಯಾಗಿದ್ದಾನೆ. ಆರೋಪಿಯೂ ಕೊಳ್ಳೆಗಾಲದ ತೇರಂಬಳ್ಳಿ ಗ್ರಾಮದ ನಿವಾಸಿ. ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಹವ್ಯಾಸಿ ಹಾಡುಗಾರರಾಗಿದ್ದರು. ಆಗಾಗ ಸಿಂಗಿಂಗ್ ಇವೆಂಟ್ಸ್ಗಳಲ್ಲಿ ಹಾಡು ಹೇಳಲು ಹೋಗುತ್ತಿದ್ದಾಗ ಪರಸ್ಪರ ಪರಿಚಯವಾಗಿತ್ತಂತೆ.
ಆ ಪರಿಚಯ ಪ್ರೇಮಕ್ಕೆ ತಿರುಗಿದ ಮೇಲೆ ಈ ಕೃತ್ಯ ಜರುಗಿದೆ ಅಂತಾ ಹೇಳಲಾಗುತ್ತಿದೆ.
ಮಹಿಳೆಗೆ ಪ್ರೀತಿ ಮಾಡುವಂತೆ ಹರೀಶ ಪಿಡಿಸುತಿದ್ದನಂತೆ. ಒತ್ತಡಕ್ಕೆ ಮಣಿದ ಟೀಚರ್ ಪ್ರೀತಿ ಮಾಡಲು ಒಪ್ಪಿಗೆ ನೀಡಿದ ನಂತರ ಮಹಿಳೆ ಮನೆಗೆ ಆಗಾಗ ಹರೀಶ್ ಬಂದು ಹೋಗುತ್ತಿದ್ದನಂತೆ. ಮಹಿಳೆಗೆ ಆ ಯುವಕ ಮದ್ಯ ಕುಡಿಸಿ ನನ್ನ ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡು ಅತ್ಯಾಚಾರ ಮಾಡಿದ್ದಾನೆ ಎಂದು ಶಿಕ್ಷಕಿ ಆರೋಪ ಮಾಡಿದ್ದಾರೆ. ಆದರೆ ಈಗ ಕಳೆದ ಎರಡು ತಿಂಗಳಿಂದ ಯುವಕ ಯಾರ ಸಂಪರ್ಕಕ್ಕೂ ಕಾಣೆಯಾಗಿದ್ದಾನೆ. ಈಗ ಯುವತಿ ಅವನು ನನಗೆ ಮದುವೆಯಾಗಬೇಕು ಎಂದು ಸರಸ್ವತಿ ಪುರಂ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ನನಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಬೇಡಿಕೊಳ್ಳುತ್ತಿದ್ದಾರೆ.