ಬಾಲಿವುಡ್ ಬ್ಯೂಟಿ ತಾಪ್ಸಿಪನ್ನು ಇತ್ತೀಚೆಗೆ ಸೀಕ್ರೆಟ್ ಆಗಿ ಮದುವೆಯಾಗಿರೋದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷ್ಯ. ಆದರೆ ಮದುವೆಯ ಒಂದೇ ಒಂದು ಫೋಟೋ ಲೀಕ್ ಆಗದಂತೆ ಪನ್ನು ಕಾಪಾಡಿಕೊಂಡಿದ್ದರು. ಹೀಗಿದ್ದರೂ ಕೂಡ ನಟಿ ತಾಪ್ಸಿಯ ಮ್ಯಾರೇಜ್ ವಿಡಿಯೋ ಇದೀಗ ಹೊರಬಿದ್ದಿದೆ. ಸಂತಸದಿoದ ಮದುವೆ ದಿನ ವೇದಿಕೆ ಏರುತ್ತಿರುವ ನಟಿಯ ವಿಡಿಯೋ ಲೀಕ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ತಾಪ್ಸಿ ಪನ್ನು ಮಾರ್ಚ್ 25 ರಂದು ಗುಟ್ಟಾಗಿ ಮದುವೆ ಆಗಿದ್ದಾರೆ. ತಾಪ್ಸಿ ತನ್ನ ಬಹುಕಾಲದ ಗೆಳೆಯ ಮಥಿಯಾಸ್ ನನ್ನು ಮದುವೆಯಾಗಿದ್ದಾರೆ.
10 ವರ್ಷಗಳ ಡೇಟಿಂಗ್ ನಂತರ, ತಾಪ್ಸಿ ಮತ್ತು ಮಥಿಯಾಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೊಸ ಬಾಳು ಶುರು ಮಾಡಿದ್ದಾರೆ. ಇಬ್ಬರ ಮದುವೆಗೆ ಆಪ್ತರು ಮತ್ತು ಕುಟುಂಬದವರು ಮಾತ್ರ ಸಾಕ್ಷಿಯಾಗಿದ್ದರು.ಉದಯಪುರದಲ್ಲಿ ತಾಪ್ಸಿ ಮತ್ತು ಮಥಿಯಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಾಪ್ಸಿ ಅವರ ಪತಿ ಮಥಿಯಾಸ್ ಬೋ ಯುರೋಪಿಯನ್ ದೇಶವಾದ ಡೆನ್ಮಾರ್ಕ್ನ ನಿವಾಸಿ. ಮಥಿಯಾಸ್ ಬ್ಯಾಡ್ಮಿಂಟನ್ ಆಟಗಾರ ಆಗಿದ್ದು, ಸಮ್ಮರ್ ಒಲಿಂಪಿಕ್ಸ್ ನಲ್ಲೂ ಬೆಳ್ಳಿ ಪದಕ ಗೆದ್ದಿದ್ದಾರೆ. ಇದರೊಂದಿಗೆ ಯುರೋಪಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಮಥಿಯಾಸ್ ಅವರು ತಾಪ್ಸಿ ಮೇಲಿನ ಪ್ರೀತಿಯನ್ನು ಸೊಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. ಅವರು ಆಗಾಗಿ ತಾಪ್ಸಿ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.ಮಾರ್ಚ್ 20ರಿಂದ ಮದುವೆ ಸಂಭ್ರಮ ಶುರುವಾಗಿದ್ದು, ಮಾರ್ಚ್ 25ಕ್ಕೆ ತಾಪ್ಸಿ ಪನ್ನು- ಮಥಾಯಸ್ ಬೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾಪ್ಸಿ ಸಿಖ್ ಧರ್ಮಕ್ಕೆ ಸೇರಿದವರು. ಮಥಾಯಸ್ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ. ಎರಡು ಧರ್ಮದ ಪದ್ಧತಿಯಂತೆ ಮದುವೆ ನೆರವೇರಿದೆ. ತಾಪ್ಸಿ ಮದುವೆಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನಟಿಗೆ ಶುಭ ಹಾರೈಸುತ್ತಿದ್ದಾರೆ.