ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮಾತಿನ ಮಲ್ಲಯುದ್ಧ ಮಿತಿ ಇಲ್ಲ. ಪ್ರತಿಷ್ಠೆಯ ಕಣದಲ್ಲಿ ಗೆದ್ದು ಬೀಗಲು ಕಾಂಗ್ರೆಸ್, ಬಿಜೆಪಿ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಬರ ಪರಿಹಾರ ಹಾಗೂ ಜಿಎಸ್ ಟಿ ಪಾಲು ನೀಡದ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಪ್ರತಿನಿತ್ಯ ತಿವಿಯುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಕ್ಕೆ ಅಂಕಿಅಂಶಗಳ ಮೂಲಕವೇ ನೀಡಿರುವ ಸಿದ್ದರಾಮಯ್ಯ, ರಾಜೀನಾಮೆಯ ಸವಾಲನ್ನೂ ಹಾಕಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಕೆಂಡಕಾರಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಬಿಜೆಪಿ ಪೋಸ್ಟ್ ಮಾಡಿದ್ದು,
ಸ್ವಾಭಿಮಾನಿ ಕನ್ನಡಿಗರಿಗೆ ಸಾಲದ ಶೂಲ ಹೆಚ್ಚಳ – ನೆಮ್ಮದಿಯ ನಾಳೆಗಳು ಕಳವಳ..!
“ಸ್ವಾಭಿಮಾನಿ ಕನ್ನಡಿಗರಿಗೆ ಸಾಲದ ಶೂಲ ಹೆಚ್ಚಳ – ನೆಮ್ಮದಿಯ ನಾಳೆಗಳು ಕಳವಳ. ಬೇಕಾಬಿಟ್ಟಿಯಾಗಿ ಸಾಲವನ್ನು ಮಾಡಿ ಕರ್ನಾಟಕವನ್ನು ದಿವಾಳಿ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರೇ, ಹೆಚ್ಚಿನ ಬಡ್ಡಿಗೆ ತಂದ ಸಾಲದ ಹಣ ₹1,95,218 ಕೋಟಿ ಯಾರ ಜೇಬನ್ನು ತಲುಪುತ್ತಿದೆ..? ಎಂದು ಪ್ರಶ್ನೆ ಮಾಡಿದೆ.“