- ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯಕ್ಕೆ 21 ವರ್ಷಗಳು
- ಈ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ದುಬೈನಲ್ಲಿ ಸೆಲಬ್ರೇಟ್
- ಫ್ಯಾನ್ಸ್ ಜೊತೆ ಫೋಟೋಗೆ ಪೋಸ್ ಕೊಟ್ಟ ದಚ್ಚು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ಜೋಡಿ
ಈ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿನಾ ದುಬೈನಲ್ಲಿ ಸೆಲಬ್ರೇಟ್ ಮಾಡ್ಕೊಂಡಿದ್ದಾರೆ. ಅಲ್ಲಿನ ಫ್ಯಾನ್ಸ್ ಡಿಬಾಸ್ ದಂಪತಿಗೆ ಸರ್ ಪ್ರೈಸ್ ಕೊಟ್ಟಿದ್ದಾರೆ. ರೆಸ್ಟೋರೆಂಟ್ ವೊಂದರಲ್ಲಿ ಕೇಕ್ ಕಟ್ ಮಾಡಿ ಅಭಿಮಾನಿಗಳ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಈ ವೇಳೆ ಫ್ಯಾನ್ಸ್ ಗೆ ದಚ್ಚು ಫೋಟೋ ಫೋಸ್ ಕೊಟ್ಟಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ
ಅಂದ್ಹಾಗೇ, ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯಕ್ಕೆ 21 ವರ್ಷಗಳು ತುಂಬಿವೆ. 19-05-2003 ರಂದು ಬೆಳಗ್ಗೆ 9.10 ರಿಂದ 9.50 ರವರೆಗಿದ್ದ ಶುಭ ಮಿಥುನ ಲಗ್ನದಲ್ಲಿ ವಿಜಯಲಕ್ಷ್ಮೀ ಕೊರಳಿಗೆ ನಟ ದರ್ಶನ್ ಮಾಂಗಲ್ಯಧಾರಣೆ ಮಾಡಿದ್ದರು. ಧರ್ಮಸ್ಥಳದ ವಸಂತ್ ಮಹಲ್ನಲ್ಲಿ ದರ್ಶನ್- ವಿಜಯಲಕ್ಷ್ಮಿ ಮದುವೆ ನೆರವೇರಿತ್ತು. ಅಂದು ಚಿತ್ರರಂಗದ ಕೆಲವೇ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇವತ್ತು ಇವರಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ವಿನೀಶ್ ಎಂಬ ಮಗನಿದ್ದಾನೆ. ಈಗಾಗಲೇ, ಅಪ್ಪನ ಜೊತೆ ತೆರೆ ಮೇಲೂ ಮಿಂಚು ಹರಿಸಿದ್ದಾನೆ. ಇತ್ತೀಚಿಗೆ ತಾಯಿ ಜೊತೆ ವಿನೀಶ್ ದುಬೈ ಟ್ರಿಪ್ ಹೋಗಿದ್ದ. ಈಗ ಪತಿ ಜೊತೆ ವಿಜಯಲಕ್ಷ್ಮಿ ದುಬೈ ಟ್ರಿಪ್ ನಲ್ಲಿದ್ದಾರೆ
ನಿಮಗೆಲ್ಲ ಗೊತ್ತಿರುವ ಹಾಗೇ ದಚ್ಚು ಹಾಗೂ ವಿಜಯಲಕ್ಷ್ಮಿ ದಾಂಪತ್ಯ ಸಾಕಷ್ಟು ಏಳುಬೀಳುಗಳಿಂದ ಕೂಡಿತ್ತು. ಆದ್ರೀಗ ಎಲ್ಲಾ ಮನಸ್ತಾಪ ಮರೆತು ಈ ಜೋಡಿ ಸುಂದರ ಸಂಸಾರ ಸಾಗಿಸ್ತಿದೆ. ಹೀಗಾಗಿ, ಯಾವ ಕೆಟ್ಟ ಕಣ್ಣು ಈ ಜೋಡಿ ಮೇಲೆ ಬೀಳದಿರಲಿ. ಇವರ ಸಂಸಾರ ಸದಾ ಆನಂದಸಾಗರವಾಗಿರಲಿ ಅಂತ ಹೇಳಲು ಇಚ್ಚಿಸುತ್ತೇವೆ.
ಸದ್ಯ ದುಬೈನಲ್ಲಿರುವ ಡಿಬಾಸ್, ವಾಪಾಸ್ ಆದ ನಂತರ ಡೆವಿಲ್ ಟೀಮ್ ಸೇರಿಕೊಳ್ಳಲಿದ್ದಾರೆ. ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣದ ವೇಳೆ ಕೈಗೆ ಪೆಟ್ಟಾಗಿದ್ದರಿಂದ ಡೆವಿಲ್ ಶೂಟಿಂಗ್ ಸ್ಥಗತಿಗೊಳಿಸಲಾಗಿತ್ತು. ಈಗ ಸಾರಥಿ ನೋವಿನಿಂದ ಚೇತರಿಸಿಕೊಂಡಿದ್ದು ಮತ್ತೆ ಡೆವಿಲ್ ಚಿತ್ರೀಕರಣಕ್ಕೆ ಕಿಕ್ ಸ್ಟಾರ್ಟ್ ನೀಡಲಾಗ್ತಿದೆ. ತಾರಕ್ ನಂತರ ದರ್ಶನ್ ಹಾಗೂ ಪ್ರಕಾಶ್ ವೀರ್ ಕಾಂಬೋ ಒಂದಾಗಿದ್ದು, ಡೆವಿಲ್ ಮೇಲೆ ನಿರೀಕ್ಷೆ ಹೆಚ್ಚಿದೆ. ಚಿತ್ರಕ್ಕೆ ನಾಯಕಿಯಾಗಿ ರಚನಾ ರೈ ಅಯ್ಕೆಯಾಗಿದ್ದಾರೆ. ಶೀಘ್ರದಲ್ಲೇ ಅವರು ಕೂಡ ಶೂಟಿಂಗ್ ಸೇರಿಕೊಳ್ಳಲಿದ್ದಾರೆ.