ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಸೇರಿದಂತೆ ಹಲವು ಹೆದ್ದಾರಿಗಳ ಟೋಲ್ ಶುಲ್ಕ ಏಪ್ರಿಲ್ 1 ರಿಂದ ಹೆಚ್ಚಳ ಆಗುವ ಸಾಧ್ಯತೆ ಇದೆ. ಏಪ್ರಿಲ್ 1 ರಿಂದ ವಾಹನ ಸವಾರರು ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ಹೈದರಾಬಾದ್ ಹೆದ್ದಾರಿ ಮತ್ತು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಹೋಸಕೋಟೆ-ದೇವನಹಳ್ಳಿ ವಿಭಾಗವನ್ನು ಬಳಕೆ ಮಾಡುವಲ್ಲಿ ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತೆ. ಸಗಟು ಬೆಲೆ ಸೂಚ್ಯಂಕ ಪ್ರಕಾರ ಟೋಲ್ ಶುಲ್ಕ ಶೇಕಡಾ 3 ರಿಂದ 14ರಷ್ಟು ಹೆಚ್ಚಳ ಆಗಿದೆ. ಈ ಶುಲ್ಕ 2025ರ ಮಾರ್ಚ್ 31ರವರೆಗೂ ಜಾರಿಯಲ್ಲಿರುತ್ತದೆ.