ಕೆ.ಆರ್.ನಗರ ಸಂತ್ರಸ್ತೆ ಕಿಡ್ನಾಪ್ ಕೇಸ್ ಹೊತ್ತು ಊರೂರು ಸುತ್ತಿದ ಭವಾನಿಗೆ ಕೋರ್ಟ್ ಬಂಧನ ಭೀತಿ ದೂರ ಮಾಡಿತ್ತು. ಈ ಬೆನ್ನಲ್ಲೇ ಎಸ್ಐಟಿ ಮುಂದೆ ಹಾಜರಾದ ಭವಾನಿ ವಿಚಾರಣೆ ಎದುರಿಸಿದ್ದಾರೆ. ದೇವೆಗೌಡರ ಕುಟುಂಬಕ್ಕೆ ಸಂಕಷ್ಟ-ಸಂಭ್ರಮ ಜಂಟಿಯಾಗಿ ಅಪ್ಪಳಿಸಿದೆ. ನಾಳೆ ಡೆಲ್ಲಿಯಲ್ಲಿನ ಪದಗ್ರಹಣಕ್ಕೆ ಇಡೀ ಕುಟುಂಬ ತೆರಳ್ತಿದೆ. ಆದರೆ ಇತ್ತ, ಪ್ರಜ್ವಲ್ ಅನಾಚಾರ ಮನೆ ಮಂದಿಗೆಲ್ಲಾ ಸಂಕಷ್ಟಕ್ಕೆ ದೂಡಿದೆ. ತಾಯಿ ಭವಾನಿ ಬಂಧನದ ಭೀತಿಯಿಂದ ಪಾರಾಗಿ ಎಸ್ಐಟಿ ಮುಂದೆ ಹಾಜರಾಗಿದ್ದಾರೆ.
ಭವಾನಿ ರೇವಣ್ಣ SIT ಹೇಳಿದ್ದೆನು..?
- ನಮ್ಮ ಮನೆಯಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದುದು ನಿಜ
- ಕಿಡ್ನಾಪ್ ಕೇಸ್ನಲ್ಲಿ ನನ್ನ ಪಾತ್ರವಿಲ್ಲ.
- ನನ್ನ ಮೇಲೆ ಬಂದಿರುವ ಆರೋಪಗಳೆಲ್ಲಾ ಸುಳ್ಳು
- ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ
ಭವಾನಿ ಹೇಳಿಕೆಯನ್ನ ಎಸ್ಐಟಿ ಅಧಿಕಾರಿಗಳು ಸಂಪೂರ್ಣವಾಗಿ ದಾಖಲಿಸಿಕೊಂಡಿದ್ದಾರೆ. ಅಗತ್ಯಬಿದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದೇ ಕೇಸ್ನಲ್ಲೇ ರೇವಣ್ಣ ಜೈಲು ಯಾತ್ರೆ ಮುಗಿಸಿ ಬಂದಿದ್ದಾರೆ. ಇದೀಗ ಕೋರ್ಟ್ ಬಂಧನ ಭೀತಿ ದೂರ ಮಾಡಿದ ಬಳಿಕ ಭವಾನಿ ಪ್ರತ್ಯಕ್ಷರಾಗಿ ವಿಚಾರಣೆ ಎದುರಿಸಿದ್ದಾರೆ.