- ಸ್ಯಾಂಡಲ್ವುಡ್ ಯುವರಾಜ ನಟ ಯುವ ರಾಜ್ಕುಮಾರ್ ದಾಂಪತ್ಯದಲ್ಲಿ ಬಿರುಕು
ಬೆಂಗಳೂರು: ಯುವರಾಜ ಹಾಗೂ ಶ್ರೀದೇವಿ ದಂಪತಿ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಇನ್ನೂ ಯುವ ರಾಜ್ಕುಮಾರ್ ಅವರಿಗೆ ವಿಚ್ಛೇದನ ಸಿಕ್ಕಿಲ್ಲ.
ಯುವ ರಾಜ್ಕುಮಾರ್ ಡಿವೋರ್ಸ್ ವಿಚಾರವಾಗಿ ಡಾ.ರಾಜ್ ಕುಮಾರ್ ಕುಟುಂಬದ ಆಪ್ತರು ಮಾಹಿತಿ ನೀಡಿದ್ದಾರೆ. ಯುವ ರಾಜ್ಕುಮಾರ್ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜ ಎನ್ನಲಾಗಿದೆ. ಸದ್ಯ ರಾಘಣ್ಣನ ಸೊಸೆ ಭಾರತದಲ್ಲಿ ಇಲ್ಲ. ಶ್ರೀದೇವಿ ಅವರು ಸದ್ಯ ಅಮೆರಿಕಾದಲ್ಲಿದ್ದು, ಅವರಿಗೆ ಇನ್ನೂ ವಿಚ್ಛೇದನ ಅರ್ಜಿಯ ಮಾಹಿತಿ ಸಿಕ್ಕಿಲ್ಲ. ಕಳೆದ 4 ದಿನಗಳ ಹಿಂದೆ ಯುವ ರಾಜ್ಕುಮಾರ್ ಅವರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಆದರೆ ಶ್ರೀದೇವಿ ಅವರಿಗೆ ವಿಚ್ಛೇದನದ ಅರ್ಜಿ ಸಿಕ್ಕಿಲ್ಲಿ. ಅಮೆರಿಕಾದಲ್ಲಿರುವ ಶ್ರೀದೇವಿ ಅವರು ವಿಚ್ಛೇದನದ ಅರ್ಜಿ ಸ್ವೀಕರಿಸಿದ ಬಳಿಕ ಯಾವ ರೀತಿ ಪ್ರತಿಕ್ರಿಯೆ ಕೊಡ್ತಾರೆ ಅನ್ನೋದರ ಮೇಲೆ ಈ ಕೇಸ್ ನಿಂತಿದೆ. ಸದ್ಯಕ್ಕೆ ಶ್ರೀದೇವಿ ಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎನ್ನಲಾಗಿದೆ.