ಯಾರು ಶ್ರೀದೇವಿ ಭೈರಪ್ಪ?
ಶ್ರೀದೇವಿ ಅವರು ಮೈಸೂರಿನಲ್ಲೇ ಹುಟ್ಟಿ ಬೆಳೆದು, ಅಲ್ಲಿಯೇ ಉನ್ನತ ಶಿಕ್ಷಣ ವ್ಯಾಸಾಂಗ ಮಾಡಿದ್ದಾರೆ. ಇವರು ಡಾ. ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ ರೂವಾರಿ ಆಗಿದ್ದರು. ಸುಮಾರು 7 ವರ್ಷದ ಹಿಂದೆ ಶ್ರೀದೇವಿ ಹಾಗೂ ಯುವರಾಜ್ ಕುಮಾರ್ ಪರಿಚಯವಾಗಿತ್ತು. ಸ್ನೇಹ, ಪ್ರೀತಿ ಬಳಿಕ ಇಬ್ಬರು ಪ್ರೀತಿಸಿ ವಿವಾಹವಾಗಿದ್ದರು.
2016ರಲ್ಲಿ ತೆರೆಕಂಡ ಯುವ ರಾಜ್ಕುಮಾರ್ ಅವರ ರನ್ ಆ್ಯಂಟನಿ ಚಿತ್ರದ ನಿರ್ಮಾಣದಲ್ಲಿ ಶ್ರೀದೇವಿ ಅವರು ಭಾಗಿಯಾಗಿದ್ದರು. ರನ್ ಆ್ಯಂಟನಿ ಪ್ರಮೋಷನ್ನಲ್ಲೂ ಶ್ರೀದೇವಿ ಭೈರಪ್ಪ ಅವರು ತೊಡಗಿಕೊಂಡಿದ್ದರು.
ಕಳೆದ ಆರೇಳು ತಿಂಗಳ ಹಿಂದೆಯೇ ಯುವ ರಾಜ್ಕುಮಾರ್ ಹಾಗೂ ಶ್ರೀದೇವಿ ಅವರು ದೂರ, ದೂರ ಆಗಿದ್ದರು. ಹಲವು ತಿಂಗಳಿಂದ ಯುವ ಜೊತೆ ಶ್ರೀದೇವಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ.\
ಈ ಹಿಂದೆ ದೊಡ್ಮನೆಯ ಪ್ರತಿ ಕಾರ್ಯಕ್ರಮದಲ್ಲಿ ಇರ್ತಿದ್ದ ಶ್ರೀದೇವಿ ಅವರು ಇತ್ತೀಚೆಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಯುವ ಸಿನಿಮಾ ಮಹೂರ್ತಕ್ಕೆ ಇದ್ದರೂ ರಿಲೀಸ್ ವೇಳೆ ಶ್ರೀದೇವಿ ಅವರು ನಾಪತ್ತೆ ಆಗಿದ್ದರು. ಇದ್ದಕ್ಕಿದ್ದ ಹಾಗೆ ಯುವರಾಜ್ ಜೊತೆ ಅಂತರ ಕಾಯ್ದುಕೊಂಡು ಯುವ ಸಿನಿಮಾದ ಶೂಟಿಂಗ್, ಪ್ರಮೋಷನ್ಗೂ ನಾಪತ್ತೆಯಾಗಿದ್ದರು.