ಉಡುಪಿಯ ಶಾಲೆಯಲ್ಲಿ ಟಿಸಿ ಕೊಟ್ಟಿಲ್ಲವೆಂದು ವಿದ್ಯಾರ್ಥಿಯೋಬ್ಬ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಬೈಂದೂರಿನಲ್ಲಿ ನಡೆದಿದೆ.. ಇನ್ನು, ಮೃತ ವಿದ್ಯಾರ್ಥಿ ನಿತಿನ್ (16) ಬೈಂದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಅಸಲಿಗೆ ವಿದ್ಯಾರ್ಥಿ ಬರೆದಿಟ್ಟ ಡೆತ್ ನೋಟ್ನಲ್ಲಿ ಬರವಣಿಗೆ ನೋಡಿದ್ರೆ ವಿದ್ಯಾರ್ಥಿ ಸಾವಿಗೆ ಶಾಲಾ ಆಡಳಿತ ಮಂಡಳಿಯೆ ಕಾರಣ ಎಂದು ಹೇಳಲಾಗುತ್ತಿದೆ.
ಡೆತ್ ನೋಟ್ ಕಣ್ಣೀರ ಕಥೆ
ಅಮ್ಮ ಅಮ್ಮ ನಾನು ನಿಮ್ಮ ಹತ್ತಿರ ತುಂಬಾ ಸತ್ಯವನ್ನು ಮುಚ್ಚಿಟ್ಟಿದ್ದೇನೆ. ನಾನು ಶಾಲೆಗೆ ಹೋದಾಗ ನಿನಗೆ ಟಿಸಿ ಕೊಡೋದಕ್ಕೆ ಆಗೋದಿಲ್ಲ. ನೀನು ಸಿಸಿಟಿವಿ ಹಾಗೂ ಬೇರೆ ವಸ್ತುಗಳನ್ನು ಹಾಳು ಮಾಡಿದ್ದೀಯಾ. ನೀನು ನಿನ್ನ ಪೋಷಕರನ್ನು ಕರೆದುಕೊಂಡು ಬರಬೇಕು. ಜತೆಗೆ ಅದಕ್ಕೆ ದಂಡ ಕಟ್ಟಬೇಕು ಅಂತ ಹೇಳಿದ್ದಾರೆ. ಆದರೆ ನನಗೆ ನಿಮ್ಮ ಕಷ್ಟಗಳನ್ನು ನೋಡೋಕೆ ಆಗದೇ, ನಿಮ್ಮ ಹತ್ತಿರ ಏನನ್ನೂ ಹೇಳೋದಕ್ಕೆ ಆಗಲಿಲ್ಲ. ಅವರು ನನಗೆ ಶಾಲೆಯಲ್ಲಿ ತುಂಬಾನೇ ಅವಮಾನ ಮಾಡಿದ್ದಾರೆ. ಅದು ನನ್ನ ಹತ್ತಿರ ಸಹಿಸಿಕೊಳ್ಳಲು ಆಗಲಿಲ್ಲ. ಅವರಿಗೆ ನಾನೂ ಹೇಳಿದ್ದೆ, ನೀವು ಹೇಳಿದ ವಸ್ತುಗಳನ್ನು ನಾನು ಹಾಳು ಮಾಡಿಲ್ಲ ಅಂತ. ಆದರೆ ಅವರು ನೀನೆ ಇದನ್ನ ಮಾಡಿದ್ದು ಅಂತ ಹೇಳಿದ್ರು. ಅದಕ್ಕೆ ನಾನು ಟಿಸಿ ಕೊಡಿ ಸರ್ ಅಂತ ಹೇಳಿದ್ದೆ. ಆದರೆ ಆ ವಸ್ತಗಳನ್ನು ರಿಪೇರಿ ಮಾಡಿಸು ಆಮೇಲೆ ಟಿಸಿ ಕೊಡುತ್ತೇನೆ ಅಂತ ಹೇಳಿದ್ದಾರೆ ಎಂದು ಡೆತ್ ನೋಟ್ನಲ್ಲಿ ಬರೆದಿಟ್ಟಿದ್ದ.