ಭಾರತೀಯ ಸಂಪ್ರದಾಯದಲ್ಲಿ ಸೀರೆ ಅವಿಭಾಜ್ಯ ಅಂಗ. ಸೀರೆಯೂ ಅನುಗ್ರಹ ಮತ್ತು ಸೊಬಗಿನ ದ್ಯೂತಕವಾಗಿದೆ. ಸೀರೆ ಎನ್ನುವುದು ಬರೀ ಉಡುಗೆಯಲ್ಲ. ಬದಲಾಗಿ ಸಂಸ್ಕೃತಿಯ ಪ್ರತೀಕವೂ ಹೌದು. ಇಂತಹ ಸೀರೆ ಬಗ್ಗೆ ಶಾಕಿಂಗ್ ಅಂಶ ಈಗ ಹೊರಬಿದ್ದಿದೆ. ಅದೇನಂದ್ರ ಸೀರೆಯೂ ಕ್ಯಾನ್ಸರ್ಗೆ ಕಾರಣವಾಗುತ್ತಂತೆ. ಹೌದು ಶಾಕಿಂಗ್ ಸುದ್ದಿಯಾದ್ರೂ ಇಂತದೊಂದು ಅಂಶ ಈಗ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿದೆ. ವೈದ್ಯಕೀಯವಾಗಿ “ಆಕ್ಸಿಲರಿ ಡರ್ಮಟೈಟಿಸ್” ಎಂದು ಕರೆಯಲಾಗುತ್ತದೆ. ಇದು ಸೀರೆ ಬಟ್ಟೆ ಮತ್ತು ಚರ್ಮದ ಮಧ್ಯೆ ನಿರಂತರ ಘರ್ಷಣೆಯಿಂದ ಉಂಟಾಗುವ ಒಂದು ರೀತಿಯ ಚರ್ಮದ ಸಮಸ್ಯೆ ಮತ್ತು ಉರಿತ ಎನ್ನಲಾಗುತ್ತದೆ. ವಿಶೇಷವಾಗಿ ಕಂಕುಳಿನ ಪ್ರದೇಶದಲ್ಲಿ. ಈ ಸ್ಥಿತಿಯು ಕೆಂಪಾಗುವಿಕೆ, ತುರಿಕೆ, ದದ್ದುಗಳು ಮತ್ತು ಕೆಲವೊಮ್ಮೆ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಇದು ಆರೋಗ್ಯಕ್ಕೆ ಅಪಾಯಕಾರಿ.
ಸೀರೆ ಕ್ಯಾನ್ಸರ್ ಎಂಬುದು ಚರ್ಮದ ಒಂದು ರೀತಿಯ ಎಸ್ ಸಿಸಿ ಕ್ಯಾನ್ಸರ್ ಆಗಿದ್ದು, ಸೀರೆಯನ್ನು ನಿರಂತರವಾಗಿ ಧರಿಸುವ ಮಹಿಳೆಯರಲ್ಲಿ ಸೊಂಟದ ಉದ್ದಕ್ಕೂ ಸಂಭವಿಸುತ್ತದೆ. ಬಿಗಿಯಾಗಿ ಕಟ್ಟಿದ ಸೀರೆಯನ್ನು ನಿರಂತರವಾಗಿ ಧರಿಸುವುದರಿಂದ ನಿರಂತರ ಕಿರಿಕಿರಿ ಮತ್ತು ಘರ್ಷಣೆ ಉಂಟಾಗುತ್ತದೆ, ಇದರ ಪರಿಣಾಮವಾಗಿ ಚರ್ಮದ ವರ್ಣದ್ರವ್ಯದಲ್ಲಿ ಬದಲಾವಣೆಗಳು ಉಂಟಾಗುತ್ತವೆ ಮತ್ತು ಅಂತಿಮವಾಗಿ ಮಾರಕ ಬದಲಾವಣೆಗಳಿಗೆ ಕಾರಣವಾಗುತ್ತವೆ. ಇದು ಬಹಳ ಅಪರೂಪದ ರೀತಿಯ ಕ್ಯಾನ್ಸರ್ ಆಗಿದೆ ಮತ್ತು ಭೌಗೋಳಿಕವಾಗಿ ಭಾರತೀಯ ಉಪಖಂಡದಲ್ಲಿ ಕಾಶ್ಮೀರದ ಕಾಂಗ್ರಿ ಕ್ಯಾನ್ಸರ್ ಹೋಲುತ್ತದೆ.ಇದಲ್ಲದೆ, ಸೀರೆ ತಯಾರಿಕೆಯಲ್ಲಿ ಬಳಸುವ ವಸ್ತುಗಳು ಸಹ ಸಮಸ್ಯೆಗೆ ಕಾರಣವಾಗಬಹುದು.