ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್, ಸದ್ಯ ಸ್ಯಾಂಡಲ್ ವುಡ್ನ ಸಕ್ರಿಯ ಮತ್ತು ಕ್ರಿಯೆಟಿವ್ ಫಿಲ್ಮ್ ಪ್ರೊಡ್ಯೂಸರ್. ಈಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೊಸ ಕಾರ್ ಖರೀದಿ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ಹೊಸದೊಂದು ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ. ಐಶಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ್ದು, ಕಾರಿನೊಟ್ಟಿಗೆ ಅಶ್ವಿನಿ ಅವರು ನಿಂತು ಫೋಟೋ ತೆಗೆಸಿಕೊಂಡಿರುವ ಚಿತ್ರವನ್ನ, ಆಡಿ ಬೆಂಗಳೂರು ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡಿದೆ. ಗ್ರೇ ಬಣ್ಣದ ಆಡಿ ಕ್ಯೂ 7 ಕಾರು ಆಗಿದ್ದು, ಈ ಕಾರಿನ ಬೆಲೆ ಬೆಂಗಳೂರಿನಲ್ಲಿ 1.10 ಕೋಟಿಯಿಂದ 1.20 ಕೋಟಿ.