- 7 ವರ್ಷದ ಲವ್ ಮ್ಯಾರೇಜ್ಗೆ ಬಿತ್ತಾ ಫುಲ್ ಸ್ಟಾಪ್?
ಸ್ಯಾಂಡಲ್ವುಡ್ ನಟ ಯುವ ರಾಜ್ಕುಮಾರ್ ಮತ್ತು ಪ್ರೀತಿಸಿ ವಿವಾಹವಾದ ಮಡದಿ ಶ್ರೀದೇವಿ ಭೈರಪ್ಪ ನಡುವೆ ವಿಚ್ಛೇದನ ಎಂಬ ಶಬ್ಧ ಕೇಳಿಬಂದಿದೆ. ಆದರೆ ಅಭಿಮಾನಿಗಳು ಈ ಸುದ್ದಿ ಆಘಾತ ನೀಡಿದೆ. ಅನೇಕರು ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸುತ್ತಿದ್ದಾರೆ.
ಮೂಲತಃ ಮೈಸೂರಿನ ಹುಡುಗಿ ಶ್ರೀದೇವಿ ಭೆರಪ್ಪ. ಅಲ್ಲೇ ಹುಟ್ಟಿ ಅಲ್ಲೇ ಬೆಳೆದು ಉನ್ನತ ಶಿಕ್ಷಣ ಮುಗಿಸಿದರು.
ಏಳು ವರ್ಷ ಪ್ರೀತಿ ಕೊನೆಯಾಯ್ತಾ?
ಯುವ ಮತ್ತು ಶ್ರೀದೇವಿ ಪ್ರಾರಂಭದಲ್ಲಿ ಫ್ರೆಂಡ್ಸ್ ಆಗಿದ್ದರು. ಬಳಿಕ ಇವರ ಸ್ನೇಹ ಪ್ರೀತಿಗೆ ತಿರುಗಿದೆ. ಅಚ್ಚರಿಯ ಸಂಗತಿ ಎಂದರೆ 7 ವರ್ಷದಿಂದ ಈ ಜೋಡಿ ಪ್ರೀತಿಸಿ ಬಳಿಕ ವಿವಾಹವಾಗುತ್ತಾರೆ.
2019ರಲ್ಲಿ ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ವಿವಾಹವಾಗುತ್ತಾರೆ. ಬಳಿಕ ರಾಜ್ ಫ್ಯಾಮಿಲಿ ಸೇರುತ್ತಾರೆ. ಅಂದಹಾಗೆಯೇ ಶ್ರೀದೇವಿ ‘ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ’ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೀಗ ಈ ಜೋಡಿ ನಡುವೆ ಮನಸ್ತಾಪವಿದೆ ಎಂದು ಹೇಳಲಾಗುತ್ತಿದೆ.