ಗ್ರಾಮಾಂತರ ಪ್ರದೇಶದಲ್ಲಿ ಜನನ ಪತ್ರಗಳನ್ನು ಆಯಾ ಸರಕಾರಿ ಆಸ್ಪತ್ರೆ, ನಾಡ ಕಚೇರಿ, ತಾಲೂಕು ಕಚೇರಿಗಳಲ್ಲಿ ಪಡೆಯಲು ಅವಕಾಶವಿತ್ತು. ಅದೇ ತರ ಮರಣ ಪತ್ರಗಳನ್ನು ಆಯಾ ನಾಡ ಕಚೇರಿಗಳಲ್ಲಿ ನೀಡಲಾಗುತ್ತಿತ್ತು. ಕೆಲವರು ಅನ್ಯ ಉದ್ದೇಶಗಳಿಗಾಗಿ ಇಂಥ ಪತ್ರಗಳನ್ನು ಅಕ್ರಮವಾಗಿ ಪಡೆದುಕೊಂಡು ದುರುಪಯೋಗಪಡಿಸಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದಂತೆ ಸರಕಾರ ಅಲರ್ಟ್ ಆಗಿದೆ ಅಕ್ರಮಗಳಿಗೆ ಕಡಿವಾಣ ಹಾಕಲು ಒಂದು ಹೆಜ್ಜೆ ಮುಂಧಾಗಿದೆ.
ಗ್ರಾಮಾಂತರ ಪ್ರದೇಶದ ನಾಗರಿಕ ನೋಂದಣಿ ಪದ್ಧತಿ ಬಲಪಡಿಸಲು ಜನನ ಮತ್ತು ಮರಣ ನೋಂದಣಿಗಳನ್ನು ಶೇ.100 ರಷ್ಟು ದಾಖಲಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಯ ಗ್ರಾಪಂಗಳಲ್ಲಿಯೇ ಜನನ ಮರಣ ಪತ್ರಗಳ ದಾಖಲೆ ಸಿಗಲಿದೆ.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಜನನ ಮರಣ ನೋಂದಣಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಲಿದಾರೆ. ಇದೇ ಜೂನ್ 11 ರಿಂದ ನಾಲ್ಕು ದಿನಗಳ ಕಾಲ ಜಿಲ್ಲೆಯ ಅಧಿಕಾರಿಗಳು ತರಬೇತಿ ಪಡೆದು ಈ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುತ್ತಾರೆ. ನಂತರ ಆನ್ಲೈನ್ನಲ್ಲಿ ತಂತ್ರಾಂಶ ಜನರೇಟ್ ಮಾಡಿಕೊಳ್ಳುತ್ತಾರೆ. ಎಲ್ಲಿ ಬೇಕಾದರೂ ಸರ್ಟಿಫಿಕೇಟ್ ತೆಗೆದುಕೊಳ್ಳುವ ವ್ಯವಸ್ಥೆಯಿರುವುದರಿಂದ ಜನರು ಈ ದಾಖಲೆಗಳಿಗೆ ಅಲೆಯುವುದು ತಪ್ಪಲಿದೆ.
ನೋಂದಣಿ ಮಾಡುವುದು ಹೇಗೆ.?
ಇ-ಜನ್ಮ ಪೋರ್ಟ್ಲ್ನಲ್ಲಿ ಆಧಾರ್ ಕಾರ್ಡ್ ಮಾದರಿಯಲ್ಲಿಯೇ ಒಬ್ಬರಿಗೆ ಒಂದು ನಂಬರ್ ನೀಡಲಾಗುತ್ತೆ
ಇದರಿಂದ ನಕಲಿ ಮಾಡಿ ಸರ್ಟಿಫಿಕೇಟ್ ಪಡೆಯಲು ಸಾಧ್ಯವಿಲ್ಲ
ಮಗು ಹುಟ್ಟಿದ ತಕ್ಷಣ ಆ ಮಾಹಿತಿಯನ್ನು ಗ್ರಾಮ ಪಂಚಾಯತ್ಗಳಿಗೆ ನೀಡಬೇಕು
ಇ-ಜನ್ಮ ಪೋರ್ಟ್ಲ್ನಲ್ಲಿ ತಂದೆ, ತಾಯಿ ಹೆಸರು, ಆಧಾರ್, ಪಾನ್ ಕಾರ್ಡ್ ಸೇರಿ ಯಾವುದಾದರೊಂದು ದಾಖಲಾತಿ ನೀಡಿ ಅಪ್ಲೋಡ್ ಮಾಡಲಾಗುತ್ತೆ
ಸರ್ಟಿಫಿಕೇಟ್ನೊಂದಿಗೆ ನಂಬರ್ ವೊಂದು ಜನರೇಟ್ ಆಗತ್ತೆ ಈ ನಂಬರ್ ಪಡೆದು ಎಲ್ಲಿ ಬೇಕಾದರೂ ಆನ್ಲೈನ್ನಲ್ಲಿ ಮಾಹಿತಿ, ದಾಖಲೆ ಪಡೆದುಕೊಳ್ಳಬಹುದು.
ನೊಂದಣಿ ಲಿಂಕ್: BIRTHS AND DEATHS | OFFICE OF THE CHIEF REGISTRAR OF BIRTHS AND DEATHS (karnataka.gov.in)
ಇದರಿಂದ ಏನು ಲಾಭ
ನಕಲಿ ದಾಖಲೆ ಸೃಷ್ಟಿಸಿ ಭೂಮಿಯನ್ನು ಅಕ್ರಮವಾಗಿ ಪಡೆಯಲು ಮರಣ ಪತ್ರಗಳನ್ನು ಸೃಷ್ಟಿಸಿರುವ ಉದಾರಹಣೆಗಳು ಸಾಕಷ್ಟಿವೆ. ಇ-ಜನ್ಮ ತಂತ್ರಾಂಶದಲ್ಲಿ ಇದಕ್ಕೆ ಕಡಿವಾಣ ಬೀಳಲಿದೆ.ಮರಣ ಹೊಂದಿದ ವ್ಯಕ್ತಿಯ ಮಾಹಿತಿಯನ್ನು ಗ್ರಾಪಂ ಅಧಿಕಾರಿಗಳು ಈ ಪೋರ್ಟ್ನಲ್ಲಿ ಅಪ್ಲೋಡ್ ಮಾಡಿದ ಮೇಲೆ ಈ ಮಾಹಿತಿ ಆನ್ಲೈನ್ನಲ್ಲಿ ಸಿಗುವುದರಿಂದ ಸುಳ್ಳು ಸರ್ಟಿಫಿಕೇಟ್ ಪಡೆಯಲು ಸಾಧ್ಯವಾಗುವುದಿಲ್ಲ. ಜನನ ಮತ್ತು ಮರಣ ಸರ್ಟಿಪಿಕೇಟ್ನಲ್ಲಿ ಯಾವುದೇ ತರಹ ತಿದ್ದುಪಡಿ ಮಾಡಬೇಕಾದರೆ, ಎಲ್ಲಿ ಅಪ್ಲೋಡ್ ಮಾಡಲಾಗಿದೆಯೋ ಅಲ್ಲಿಯೇ ತಿದ್ದುಪಡಿ ಮಾಡಿಸಬಹುದು.
ಏನು ಉದ್ದೇಶ
ಪ್ರತಿಯೊಬ್ಬ ವ್ಯಕ್ತಿಗೂ ಜನನ ಮತ್ತು ಮರಣ ಪತ್ರಗಳು ಮುಖ್ಯವಾದ ದಾಖಲೆಗಳಾಗಿದ್ದು, ಕೆಲವೊಮ್ಮೆ ಇವುಗಳನ್ನು ಪಡೆಯಲು ಸಾಕಷ್ಟು ಪರದಾಟ ನಡೆಸಬೇಕಿತ್ತು. ಶಾಲೆಗಳಲ್ಲಿಮಕ್ಕಳ ದಾಖಲಾತಿಗೆ ಜನನ ಪ್ರಮಾಣ ಪತ್ರ ಮುಖ್ಯವಾಗಿದೆ. ಕೆಲವೊಮ್ಮೆ ಹಳ್ಳಿಗಳಲ್ಲಿ ಅಗತ್ಯ ತಿಳಿವಳಿಕೆಯಿಲ್ಲದೆ ಜನನ ಮಾಹಿತಿಯನ್ನು ಸ್ಥಳೀಯವಾಗಿ ನೋಂದಾಯಿಸದೇ ಇದ್ದಾಗ ಜನನ ದಾಖಲೆ ಸಿಗುತ್ತಿರಲಿಲ್ಲ. ಮಕ್ಕಳು ಶಾಲೆಗೆ ಸೇರಿಸಬೇಕಾದಾಗ ನ್ಯಾಯಾಲಯದ ಮೂಲಕ ದಾಖಲೆ, ಸಾಕ್ಷಿ ನೀಡಿ ಜನನ ಪತ್ರ ಪಡೆಯಬೇಕಿತ್ತು. ಗ್ರಾಪಂಗಳಲ್ಲಿ ಡಿಜಿಟಿಲ್ ನೋಂದಣಿಯಾಗುವುದರಿಂದ ಈ ದಾಖಲೆಗಳು ಜನರ ಕೈಗೆ ಸುಲಭವಾಗಿ ಕೈಗೆಟುಕಲಿವೆ.