ಸ್ಯಾಂಡಲ್ವುಡ್ ಕ್ವೀನ್..ಮೋಹಕ ತಾರೆ ರಮ್ಯಾ, ತಮ್ಮ ಅಭಿಮಾನಿಗಳಿಗೆ ಮತ್ತೆ ಶಾಕ್ ನೀಡಿದ್ದಾರೆ. ಬಹುನಿರೀಕ್ಷಿತ ಉತ್ತರಕಾಂಡ ಚಿತ್ರದಿಂದ ನಾನು ಹೊರ ಬಂದಿದ್ದೇನೆ. ನನಗೆ ವೈಯಕ್ತಿಕ ಕಮಿಟ್ಮೆಂಟ್ ಇದೆ. ಹಾಗಾಗಿಯೇ ಸಿನಿಮಾಗೆ ಡೇಟ್ಸ್ ಕೊಡಲು ಸಾಧ್ಯ ಆಗುತ್ತಿಲ್ಲ. ಹೀಗೆ ತಮ್ಮ ಇನ್ಸ್ಟಾಗ್ರಾಮ್ ಪೇಜ್ನ ಸ್ಟೇಟಸ್ನಲ್ಲಿಯೇ ರಮ್ಯಾ ಬರೆದುಕೊಂಡಿದ್ದಾರೆ. ರಮ್ಯಾ ಸಡನ್ ನಿರ್ಧಾರದಿಂದ ಚಿತ್ರತಂಡ ಸಹ ಶಾಕ್ ಆಗಿದೆ. ಇಡೀ ಚಿತ್ರತಂಡಕ್ಕೆ ಗುಡ್ ಲಕ್ ಹೇಳುತ್ತೇನೆ ಎಂದು ರಮ್ಯಾ ತಮ್ಮ ಸೋಷಿಯಲ್ ಮೀಡಿಯಾ ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾರೆ.