ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ಬಿಗ್ ಸ್ಕೋರ್ ದಾಖಲಾಗಿದೆ. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ನಲ್ಲಿ 2ನೇ ಗರಿಷ್ಠ ರನ್ ಗಳನ್ನ ಸಿಡಿಸಿದೆ. ವಿಶಾಖಪಟ್ಟಣದ ವೈಎಸ್ ರಾಜಶೇಖರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ 272 ರನ್ ಗಳಿಸಿದೆ. ಇದರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅಧಿಕ ರನ್ ಗಳಿಸಿದ 2ನೇ ತಂಡ ಎಂಬ ದಾಖಲೆ ಬರೆದಿದೆ.
ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಸುನಿಲ್ ನರೇನ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೂಡ ಅಬ್ಬರಿಸಿದರು. ಕೇವಲ 39 ಎಸೆತಗಳಲ್ಲಿ 7 ಬೌಂಡರಿ 7 ಸಿಕ್ಸರ್ ಸಹಿತ 85 ರನ್ ಗಳಿಸಿದರು. ಸನ್ರೈಸರ್ಸ್ ಹೈದರಾಬಾದ್ ತಂಡದ 277 ರನ್ಗಳ ದಾಖಲೆ ಕೂಡ ಮುರಿಯುವ ಸಾಧ್ಯತೆ ಇತ್ತು. ಆದರೆ ಕೊನೆಯ ಓವರ್ ನಲ್ಲಿ ಇಶಾಂತ್ ಶರ್ಮಾ 2 ವಿಕೆಟ್ ಪಡೆದು ಕೇವಲ 8 ರನ್ ನೀಡಿದ್ದರಿಂದ ಕೆಕೆಆರ್ ಓಟಕ್ಕೆ ಬ್ರೇಕ್ ಹಾಕಿದರು. ಆದರೂ, ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ದಾಖಲಾಯಿತು.
ಬೃಹತ್ ರನ್ ಚೇಸ್ ಮಾಡಲು ಗ್ರೌಂಡ್ಗಿಳಿದ ಡೆಲ್ಲಿ ಕ್ಯಾಪಿಟಲ್ಗೆ ಉತ್ತಮ ಆರಂಭ ಸಿಗಲಿಲ್ಲ. ಎರಡನೇ ಓವರ್ನಲ್ಲಿ ವೈಭವ್ ಅರೋರಾ ಪೃಥ್ವಿ ಶಾಗೆ ಪೆವಿಲಿಯನ್ ಹಾದಿ ತೋರಿಸಿದರು. ವೆಂಕಟೇಶ್ ಅಯ್ಯರ್ ಓವರ್ನಲ್ಲಿ 4,6, 6, 4, 4, 4 ಬಾರಿಸಿ ಒಂದೇ ಓವರ್ನಲ್ಲಿ 28ರನ್ ಬಾರಿಸಿದರು. 55 ರನ್ ಗಳಿಸಿದಾಗ ಕ್ಯಾಚ್ ನೀಡಿ ಪಂತ್ ಔಟಾದ್ರು. ಇನ್ನೂ ಪಂತ್ಗೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತ ಪಡಿಸಿದ್ರು. ಸ್ಟಬ್ಸ್ ಕೂಡ 54 ರನ್ಗೆ ಔಟಾದ್ರು.