ಬಾಲ್ಯದಲ್ಲಿದ್ದಾಗ ಸನ್ನಿ ತುಂಬಾನೇ ಬ್ರೇವ್ ಗರ್ಲ್ ಆಗಿದ್ದರು. ಮನೆಯಲ್ಲಿ ಕಿತ್ತು ತಿನ್ನೋ ಬಡತನವಿದ್ದು, ಚಿಕ್ಕ ವಯಸಿನಲ್ಲೇ ಶ್ರೀ ಮಂತಳಾಗಬೇಕು ಎಂಬ ಡ್ರೀಮ್ ಹೊತ್ತಿದ್ದರಂತೆ. ಜಗತ್ತಿನ ಬಹುತೇಕ ಜನರಿಗೆ ಸನ್ನಿ ಲಿಯೋನ್ ಗೊತ್ತು. ಇವರ ಮಾದಕ ಮೈ ಮಾಟದಿಂದಲೇ ಪಡ್ಡೆ ಹುಡುಗರ ಮೈ ಕಾವು ಏರಿಸುತ್ತಾರೆ. ಈಗಂತೂ ಗಂಡ ಫ್ಯಾಮಿಲಿ ದತ್ತು ಮಕ್ಕಳು ಹಾಗೂ ಸಮಾಜ ಸೇವೆಗಳ ಮೂಲಕ ನಟಿ ಸನ್ನಿ ಲಿಯೋನ್ ಸಾಕಷ್ಟು ಸದ್ದು ಮಾಡುತ್ತಲೇ ಇರುತ್ತಾರೆ.
ಹೀಗಾಗಿ ಶಿಕ್ಷಣ ಪಡೆಯುತ್ತಿದ್ದಾಗಲೇ ಬೇಕರಿಯಲ್ಲಿ ಹಾಗೂ ಪೆಟ್ರೋಲ್ ಬಂಕ್ಗಳಲ್ಲಿ ಕೆಲಸ ಮಾಡಿದ್ದರು. ಕೆನಡಾದಲ್ಲಿ ನೆಲೆಸಿದ್ದ ಸನ್ನಿ ಕುಟುಂಬ ಅಷ್ಟೇನು ಹೇಳಿಕೊಳ್ಳುವಷ್ಟು ಶ್ರೀಮಂತರಿರಲಿಲ್ಲ. ಹಾಗಾಗಿ ಪದೇ ಪದೇ ಕೆಲಸ ಬದಲಾಯಿಸುತ್ತ ಪೆನ್ಸಿಲ್ ತಯಾರಿಕೆ ಕಂಪನಿಯಲ್ಲಿ ಕೂಡ ಕೆಲಸ ಮಾಡಿದ್ದರಂತೆ.
ಬಳಿಕ, ಗೆಳತಿಯ ಸಹಾಯದಿಂದ ಖ್ಯಾತ ‘ಪೆಂಟೋಸ್ ಮ್ಯಾಗಝೀನ್’ಗೆ ಕವರ್ ಪೇಜ್ ಫೋಟೋಗೆ ಪೋಸ್ ಕೊಟ್ಟರು. ನಂತರ, ತೀರಾ ಗ್ಲಾಮರಸ್ ಹಾಗೂ ಅರೆನಗ್ನ ಫೋಟೋಗಳ ಮೂಲಕ ಸಾಕಷ್ಟು ಜನಪ್ರಿಯರಾದರು. ತಮ್ಮ ವಿಶಿಷ್ಠ ಮಾದಕ ಎನಿಸುವ ಮೈಮಾಟದ ಮೂಲಕ ಅವರು ಗ್ಲಾಮರಸ್ ಜಗತ್ತಿಗೆ ಕಾಲಿಟ್ಟರು. ಆದರೂ ಕೂಡ ಸಕ್ಸಸ್ ಅಂದುಕೊಂಡಷ್ಟು ಸಿಗಲಿಲ್ಲ.
ಬಳಿಕ ಸನ್ನಿ ಲಿಯೋನ್ ಪೋರ್ನ್ ಜಗತ್ತಿಗೆ ಎಂಟ್ರಿ ಕೊಟ್ಟು ರಾತ್ರೋರಾತ್ರಿ ಭಾರೀ ಫೇಮಸ್ ಆಗಿಬಿಟ್ಟರು. ಅಲ್ಲಿಂದ ಮುಂದೆ ಸನ್ನಿ ಲಿಯೋನ್ ತಿರುಗಿ ನೋಡಲಿಲ್ಲ. ಆದರೆ, ಪ್ರತಿಯೊಂದರಿಂದ ಪಾಠ ಕಲಿತು ಲೈಫ್ನಲ್ಲಿ ಬೇರೆಯದೇ ಇಮೇಜ್ ಪಡೆದುಕೊಂಡು ಮತ್ತೆ ಗೌರವ ಗಳಿಸಿಕೊಂಡರು. ನಂತರದಲ್ಲಿ ಪೋರ್ನ್ ಬಿಟ್ಟು, ಸಿನಿರಂಗದತ್ತ ಮುಖ ಮಾಡಿ ಬಾಲಿವುಡ್ನಲ್ಲಿ ಫೇಮಸ್ ನಟಿಯಾಗಿ ಭಾರತದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು.