ಯುವ ರಾಜಕುಮಾರ್ ನಟನೆಯ ಹೊಚ್ಚಹೊಸ ಸಿನಿಮಾ ಯುವ ಇಂದು ಬಿಡುಗಡೆ ಆಗಿದೆ. ಚಿತ್ರದ ಪ್ರಿಮಿಯರ್ ಶೋ ನೋಡಿದ ಪ್ರೇಕ್ಷಕರು,ಅಪ್ಪು ಅವರನ್ನೇ ನೋಡಿದ ಹಾಗೆ ಆಯ್ತು ಎನ್ನುತ್ತಿದ್ದಾರೆ. ಸಂತೋಷ್ ಅನಂದ್ ರಾಮ್ ನಿರ್ದೇಶನ, ಹೊಂಬಾಳೆ ಫಿಲಂಸ್ ನಿರ್ಮಾಣದ ಯುವ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಡಾ.ರಾಜಕುಮಾರ್ನ ಮೂರನೇ ತಲೆಮಾರಿನ ಕುಡಿ, ರಾಘವೇಂದ್ರ ರಾಜಕುಮಾರ್ ಕಿರಿಯ ಪುತ್ರ ಯುವ ರಾಜಕುಮಾರ್ ಬೆಳ್ಳಿಪರದೆ ಮೇಲೆ ಸಖತ್ತಾಗಿಯೇ ಮಿನುಗಿದ್ದಾರೆ. ಬಹಳ ನಿರೀಕ್ಷೆಗಳ ಭಾರವನ್ನು ಹೊತ್ತು ಆಗಮಿಸಿದ್ದ ಯುವರಾಜಕುಮಾರ್ ಮೊದಲ ಸಿನಿಮಾದಲ್ಲಿ ಭರವಸೆ ಮೂಡಿಸಿದ್ದಾರೆ. ಟ್ರೈಲರ್ ಮೂಲಕ ಸದ್ದು ಮಾಡಿ, ಮೈನವಿರೇಳಿಸುವ ಆಕ್ಷನ್, ಡ್ಯಾನ್ಸ್ ನಲ್ಲೂ ಮೋಡಿ ಮಾಡ್ಡಿದ ಯುವ, ಚಿತ್ರದ ಫಸ್ಟ್ ಡೇ..ಫಸ್ಟ್ ಶೋ ರಿವ್ಯೂವ್ ಹೊರಬಿದ್ದಿದೆ. ಸಿನಿಮಾ ನೋಡಿದ ಜನ, ಅಪ್ಪು ಉತ್ತರಾಧಿಕಾರಿ ಸಿಕ್ಕೇ ಬಿಟ್ರು ಅನ್ನೋ ಖುಷಿಯಲ್ಲಿದ್ದಾರೆ. ಸ್ಯಾಂಡಲ್ವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಸಂತೋಷ್ ಅನಂದ್ ರಾಮ್, ಯುವ ಸಿನಿಮಾ ನಿರ್ದೇಶನ ಮಾಡಿದ್ದಾರೆ.ಈ ಇಂದೆ ಇದೆ ಹೊಂಬಾಳೆ ಫಿಲಂಸ್ಗೆ ರಾಜಕುಮಾರ, ಯುವರತ್ನ, ರಾಘವೇಂದ್ರ ಸ್ಟೋರ್ಸ್ ಮಾಡಿಕೊಟ್ಟಿದ್ದ ಸಂತೋಷ್,ಯುವ ರಾಜಕುಮಾರ್ ಅವರನ್ನೂ ಇದ್ದಿಗ ಅದೆ ಹೊಂಬಾಳೆ ಫಿಲಂಸ್ ಮೂಲಕ ಲಾಂಚ್ ಮಾಡಿದ್ದಾರೆ. ಆ ಮಟ್ಟದ ಹೈಪ್ ಜತೆಗೆ ಬಂದ ಯುವ ಚಿತ್ರದ ಅಬ್ಬರವೂ ಇದೀಗ ಶುರುವಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಆಂಗ್ರಿಯಂಗ್ ಮ್ಯಾನ್ ಎಂದು ಪಟ್ಟ ನೀಡುತ್ತಿದ್ದಾರೆ. ಇದು ಯುವ ಅವರ ಮೊದಲ ಸಿನಿಮಾ ಅಂತ ಅನಿಸೋದೆ ಇಲ್ಲ ಎಂದು ಕೊಂಡಾಡುತ್ತಿದ್ದಾರೆ.