ಪಕ್ಷದ ಕಾರ್ಯಕ್ರಮಗಳಿಗೆ ಸರ್ಕಾರಿ ಕಚೇರಿಗಳು ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮೊನ್ನೆಯಷ್ಟೇ ಜೆಡಿಎಸ್ ನಾಯಕ ಎಂ.ಎನ್. ನಬಿ ಹಾಗೂ ನಜ್ಮಾ ನಜೀರ್ ಕಾಂಗ್ರೆಸ್ ಪಕ್ಷಕ್ಕೆಸೇರಿದ್ರು. ಇದರ ಭಾವಚಿತ್ರವನ್ನೂ ದೂರಿನೊಂದಿಗೆ ಲಗತ್ತಿಸಿರುವ ಬಿಜೆಪಿ, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದೆ.