ತಮಿಳಿನ ಖ್ಯಾತ ನಟ ಸಿದ್ಧಾರ್ಥ್ ಹಾಗೂ ತೆಲುಗು ನಟಿ ಅದಿತಿ ರಾವ್ ಹೈದರಿ ಗುಟ್ಟಾಗಿ ಮದುವೆ ಆಗಿರುವ ಸುದ್ದಿ ಈಗ ಸಖತ್ ವೈರಲ್ ಆಗಿದೆ. ದೇವಾಲಯವೊಂದರಲ್ಲಿ ರಹಸ್ಯವಾಗಿ ಮದುವೆ ಆಗಿರುವ ಈ ಜೋಡಿ, ಹಸೆಮಣೆ ಏರಿದ ಸುದ್ದಿಯನ್ನ ಬಹಳ ಸಿಕ್ರೇಟ್ ಆಗಿಯೇ ಇಟ್ಟಿದ್ದಾರೆ. ಇನ್ನು ಈ ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, 2003ರಲ್ಲಿ ಸಿದ್ಧಾರ್ಥ್ ಅವರು ಮೇಘಾನಾ ಎನ್ನುವರನ್ನು ವಿವಾಹವಾಗಿದ್ದರು. ಆದರೆ ಈ ಸಂಬಂಧ ಬಹಳ ದಿನ ಇರಲಿಲ್ಲ. ಮೊದಲ ಪತ್ನಿಗೆ ನಟ ಸಿದ್ಧಾರ್ಥ್ 2007ರಲ್ಲಿ ಡಿವೋರ್ಸ್ ನೀಡಿದ್ರು. ತೆಲಂಗಾಣದ ವಾನಪರ್ತಿ ಜಿಲ್ಲೆಯ ಶ್ರಿರಂಗಪುರದಲ್ಲಿನ ರಂಗನಾಯಕ ಸ್ವಾಮಿ ದೇವಾಲಯದಲ್ಲಿ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಸರಳವಾಗಿ ಮದುವೆಯಾಗಿದ್ದಾರೆ. ಕೆಲವೆ ಕೆಲವು ಆಪ್ತರು, ಕುಟುಂಬ ಸದಸ್ಯರಿಗೆ ಮಾತ್ರ ಆಹ್ವಾನ ನೀಡಿದ್ದರಂತೆ.