- ಬಿಜೆಪಿ ವಿರುದ್ಧ ಜಾಹೀರಾತು ಆರೋಪ
- ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಗೆ ಜಾಮೀನು
ಬಿಜೆಪಿ ವಿರುದ್ಧ ಅಪಪ್ರಚಾರ ನೀಡಿದ್ದ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ಗೆ ಸಮ್ಸನ್ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಈ ಪ್ರಕರಣದಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 42 ನೇ ಎಸಿಎಂಎಂ ಜಡ್ಜ್ ಕೆ.ಎನ್. ಶಿವಕುಮಾರ್ ಅವರಿ ವಿಚಾರಣೆ ನಡೆಸಿದ್ದು, ಸಿಎಂ, ಡಿಸಿಎಂ ಪರ ಎಎಜಿ ಎಸ್.ಎ. ಅಹಮದ್ ವಾದ ಮಂಡಿಸಿದರು. ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ಹಾಜರಾಗಿದ್ದರು. ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಬಿಜೆಪಿಗೆ ಧಕ್ಕೆ ತಂಡ ಆರೋಪದಡಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು.