ಸ್ಯಾಂಡಲ್ವುಡ್ನಲ್ಲಿ ಏಪ್ರಿಲ್ 5 ತುಂಬಾನೆ ಸ್ಪೆಷಲ್ ಆಗಿದೆ. ಯಾಕಂದ್ರೆ ಒಂದೇ ದಿನ ಬರೋಬರೀ ಐದು ಸಿನಿಮಾ ರಿಲೀಸ್ ಆಗಲಿದೆ. ಒಂದರ ಹಿಂದೆ ಒಂದು ಅನ್ನುವ ಹಾಗೆ ಕನ್ನಡ ಹೊಸ ರೀತಿಯ ಸಿನಿಮಾಗಳು ಈ ಶುಕ್ರವಾರ ಎಲ್ಲರನ್ನೂ ರಂಜಿಸಲು ಬರ್ತಿವೆ. ವಿಶೇಷಾಗಿ ಹೊಸಬರು ಮತ್ತು ಹಳಬರು ಎಲ್ಲರೂ ಸೇರಿಯೇ ಈ ದಿನ ಥಿಯೇಟರ್ನಲ್ಲಿ ಮುಖಾಮುಖಿ ಆಗುತ್ತಿದ್ದಾರೆ. ಹಾಗೆ ಬರ್ತಿರೋ ಸಿನಿಮಾಗಳಲ್ಲಿ ಮ್ಯಾಟ್ನಿ ಸಿನಿಮಾ ಒಂದಿದೆ. ಅವತಾರ ಪುರುಷ-2 ಕೂಡ ಇದೆ. ಮಾರಿಗೋಲ್ಡ್ ಜೊತೆಗೆ ದಿಗಂತ್ ಬರ್ತಿದ್ದಾರೆ. ಭರ್ಜರಿ ಗಂಡು ಸೇರಿ ಇನ್ನೂ ಒಂದು ಸಿನಿಮಾ ಬರ್ತಿದೆ.
ದೂದ್ ಪೇಡ ದಿಗಂತ್ ಅಭಿನಯದ ಮಾರಿಗೋಲ್ಡ್ ಸಿನಿಮಾ ಏಪ್ರಿಲ್ 5 ರಂದು ರಿಲೀಸ್ ಆಗುತ್ತಿದೆ. ಬಿಗ್ ಬಾಸ್ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ ಈ ಸಿನಿಮಾದಲ್ಲಿ ದಿಗಂತ್ಗೆ ಜೋಡಿ ಆಗಿದ್ದಾರೆ. ಮಾರಿ ಪ್ಲಸ್ ಗೋಲ್ಡ್ ಎರಡೂ ಸೇರಿ ಚಿನ್ನದ ಕಥೆಯನ್ನೆ ಇದು ಹೊತ್ತುಕೊಂಡು ಬರ್ತಿದೆ. ಡೈರೆಕ್ಟರ್ ರಾಘವೇಂದ್ರ ಎಂ. ನಾಯಕ್ ಇಲ್ಲಿ ದಿಗಂತ್ಗೆ ವಿಶೇಷ ರೋಲ್ ಕೊಟ್ಟಿದ್ದರಂತೆ.
ಕನ್ನಡತಿ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್ ಅಭಿನಯದ ಸಿನಿಮಾ ಕೂಡ ಬರ್ತಿದೆ. ಪ್ರಸಿದ್ಧ್ ಡೈರೆಕ್ಷನ್ ಮಾಡಿರೋ ಈ ಚಿತ್ರದಲ್ಲಿ ಕಿರಣ್ ರಾಜ್ಗೆ ಯಶಾ ಶಿವಕುಮಾರ್ ಜೋಡಿ ಆಗಿದ್ದಾರೆ. ರಮೇಶ್ ಭಟ್, ವೀಣಾ ಸುಂದರ್, ಮಡೆನೂರು ಮನು, ಗೋವಿಂದೇ ಗೌಡ ಹೀಗೆ ಇನ್ನು ಅನೇಕರು ಈ ಚಿತ್ರದಲ್ಲಿದ್ದಾರೆ. ಕಿಟ್ಟಿ ಕೌಶಿಕ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ.
ಈ ವಾರದ ನಿರೀಕ್ಷಿತ ಸಿನಿಮಾಗಳಲ್ಲಿ ಮ್ಯಾಟ್ನಿ ಮತ್ತು ಅವತಾರ ಪುರುಷ-2 ಸಿನಿಮಾಗಳೂ ಕೂಡ ಇವೆ. ಮ್ಯಾಟ್ನಿ ಚಿತ್ರದ ಮೂಲಕ ಸತೀಶ್ ನೀನಾಸಂ ಬರ್ತಿದ್ದಾರೆ. ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವಾ ಇಲ್ಲಿ ಜೋಡಿ ಆಗಿದ್ದಾರೆ. ಮನೋಹರ್ ಕಂಪ್ಲಿ ಈ ಚಿತ್ರವನ್ನ ಡೈರೆಕ್ಟರ್ ಮಾಡಿದ್ದಾರೆ.
ಇದರ ಮಧ್ಯೆ ಅವತಾರ ಪುರುಷ-೨ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಮಾಟ-ಮಂತ್ರದ ಕಥೆ ಇದೆ. ದುಷ್ಟ ಶಕ್ತಿಗಳ ಚಿತ್ರಣ ಇದೆ. ಹಾಸ್ಯ ನಾಯಕ ನಟ ಶರಣ್ ಇಲ್ಲಿ ವಿಶೇಷವಾಗಿಯೇ ಕಾಣಿಸುತ್ತಿದ್ದಾರೆ.ಸಿಂಪಲ್ ಸುನಿ ಅವತಾರ ಪುರುಷ-೨ ಚಿತ್ರ ಡೈರೆಕ್ಟ್ ಮಾಡಿದ್ದಾರೆ. ಮೊದಲ ಭಾಗದ ಆ ಒಂದು ಕಥೆಯನ್ನೆ ಇಲ್ಲಿ ಮುಂದುವರೆಸಿದ್ದಾರೆ. ಆಶಿಕಾ ರಂಗನಾಥ್ ಈ ಚಿತ್ರದಲ್ಲಿ ಹೀರೋಯಿನ್ ಆಗಿದ್ದಾರೆ. ಸಾಯಿ ಕುಮಾರ್, ಭವ್ಯ, ಬಿ.ಸುರೇಶ್ ಸೇರಿದಂತೆ ಇನ್ನೂ ಅನೇಕರು ಈ ಚಿತ್ರದಲ್ಲಿದ್ದಾರೆ.