ಸ್ಯಾಂಡಲವುಡ್ನಲ್ಲಿ ಡೈರೆಕ್ಟರ್ ಆರ್.ಚಂದ್ರು, ಶಿವಣ್ಣನ ಕಾಂಬಿನೇಷನ್ ಭಾರಿ ಕುತೂಹಲ ಮೂಡಿಸಿದೆ. ಸ್ಯಾಂಡಲವುಡ್ ಖ್ಯಾತ ನಿರ್ದೇಶಕ ಆರ್.ಚಂದ್ರು ಈ ವರ್ಷದ ಆರಂಭದಲ್ಲಿ ಆರ್.ಸಿ ಸಂಸ್ಥೆಯಿoದ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದರು. ಇದೀಗ ಅವರ ಸಂಸ್ಥೆಯಿoದ ನಿರ್ಮಾಣವಾಗಲಿರುವ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ‘ಫಾದರ್’, ‘ಪಿಓಕೆ’, ‘ಶ್ರೀರಾಮಬಾಣ ಚರಿತೆ’, ‘ಡಾಗ್’ , ‘ಕಬ್ಜ-2’, ಸಿನಿಮಗಳನ್ನು ಆರ್.ಚಂದ್ರು ಘೋಷಣೆ ಮಾಡಿದ್ದರು. ಇದೀಗ ತಮ್ಮ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ 6ನೇ ಸಿನಿಮಾವನ್ನು ಆರ್.ಚಂದ್ರು ಅವರು ಅನೌನ್ಸ್ ಮಾಡಿದ್ದಾರೆ.
‘ಕನ್ನಡದ ಸೂಪರ್ ಹಿಟ್ ಚಿತ್ರ ಮೈಲಾರಿ ಮುಹೂರ್ತಕ್ಕೆ 14 ವರ್ಷಗಳು ತುಂಬಿವೆ. ಈ ಶುಭ ಸಂದರ್ಭದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರ ಜೊತೆ ಹೊಸ ಚಿತ್ರ ಆರಂಭಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ತಮ್ಮೆಲ್ಲರ ಆಶೀರ್ವಾದ ಇರಲಿ. ಧನ್ಯವಾದಗಳು’ , ಆರ್ ಸಿ ಸ್ಟುಡಿಯೋಸ್’ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ಚಂದ್ರು ಕೇವಲ ನಿರ್ಮಾಣ ಮಾಡುತ್ತಿದ್ದಾರೋ ಅಥವಾ ನಿರ್ದೇಶನ ಕೂಡ ಅವರೇ ಮಾಡುತ್ತಾರೋ ಎನ್ನುವ ಕುತೂಹಲ ಮೂಡಿದೆ. ಶೀಘ್ರದಲ್ಲಿ ಶೂಟಿಂಗ್ ಆರಂಭಗೊಳ್ಳಲಿದೆ ಎಂದು ಆರ್.ಚಂದ್ರು ಮಾಹಿತಿ ನೀಡಿದ್ದಾರೆ. ಇನ್ನು ‘ಮೈಲಾರಿ’ ಸಿನಿಮಾವನ್ನ ಆರ್.ಚಂದ್ರು ಡೈರೆಕ್ಷನ್ ಮಾಡಿದ್ದರು. ಆರ್.ಚಂದ್ರು ನಿರ್ದೇಶನ ಮತ್ತು ನಿರ್ಮಾಣದ ‘ಕಬ್ಜ’ ಪಾರ್ಟ್ ಒಂದರಲ್ಲಿ ಶಿವಣ್ಣ ಗೆಸ್ಟ್ ಅಪಿರಿಯೆನ್ಸ್ ಮಾಡಿದ್ದರು. ಇದೀಗ ಶಿವಣ್ಣ ಮೂರನೇ ಬಾರಿ ಆರ್.ಚಂದ್ರು ಜೊತೆ ಕೈ ಜೋಡಿಸಿದ್ದಾರೆ.ಸಿನಿಮಾ ಅನೌನ್ಸ್ ಆದ ಬಳಿಕ ‘ಮೈಲಾರಿ-2’ ಬರಬೇಕೆಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.