ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳಲ್ಲಿ ಬಿಜೆಪಿ, ರಾಜಮನೆತನದ 10 ಕ್ಕೂ ಹೆಚ್ಚು ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ಈ ಪೈಕಿ ಕೆಲವರು ರಾಜಕೀಯಕ್ಕೆ ಹಳೆ ತಲೆಗಳಾಗಿದ್ದು, ಇನ್ನೂ ಕೆಲವರು ಮೊದಲ ಬಾರಿಗೆ ರಾಜಕೀಯ ಅಖಾಡಕ್ಕೆ ಕಾಲಿಡುತ್ತಿದ್ದಾರೆ. ಈ ಮೂಲಕ ವಿಪಕ್ಷಗಳ ಅಭ್ಯರ್ಥಿಗಳಿಗೆ ಕಮಲವು ನಡುಕ ಹುಟ್ಟಿಸಿದೆ. ಇದರಲ್ಲಿ ನಮ್ಮ ರಾಜ್ಯದ ಪ್ರಸಿದ್ಧ ಮೈಸೂರು ರಾಜಮನೆತನದ ಕುಡಿ ಯದುವೀರ ಅವರನ್ನು ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇವರು ಇದೇ ಮೊದಲ ಬಾರಿಗೆ ರಾಜಕೀಯ ರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಹಾಗೇಯೆ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ರಾಜಮಾತಾ ಅಮೃತಾ ರಾಯ್ ಅವರನ್ನು ಸ್ಪರ್ಧೆಗಿಳಿಸಿದ್ರೆ, ತ್ರಿಪುರ ಕ್ಷೇತ್ರದಿಂದ ಮಾಣಿಕ್ಯ ಸಂಸ್ಥಾನದ ಮಹಾರಾಣಿ ಕೃತಿ ಸಿಂಗ್ ದೆಬ್ಬಾರ್ಮಾ ಅವರಿಗೂ ಕೂಡಾ ಕೇಸರಿ ಪಡೆ ಮಣೆ ಹಾಕಿದೆ.
ಒಡಿಶಾದಿಂದ ಮಾಳವಿಕಾ ಕೇಸರಿದೇವ್, ಸಂಗೀತಾ ಕುಮಾರಿ ದೇವ್ ಅಖಾಡಕ್ಕೆ ಇಳಿದಿದ್ದಾರೆ. ಇನ್ನೂ ರಾಜಸ್ಥಾನದ ರಾಜಸಮಂದ್ ಕ್ಷೇತ್ರದಿಂದ ಮೇವಾರ್ ರಾಜವಂಶಸ್ಥರನ್ನು ವರಿಸಿದ್ದ ಮಹಿಮಾ ಸಿಂಗ್ ಅವರನ್ನು ಕಣಕ್ಕಿಳಿಸಿದೆ.ಇನ್ನೂ ಸಿಂಧಿಯಾ ರಾಜವಂಶದ ವಸುಂಧರಾ ರಾಜೆ ಅವರ ಪುತ್ರ ದುಷ್ಯಂತ್ ಸಿಂಗ್ರನ್ನು ಜಲಾವರ್-ಬರಾನ್ನಿಂದ ಸ್ಪರ್ಧೆಗಿಳಿಸಲಾಗಿದೆ. ಇದೇ ರಾಜಮನೆತನಕ್ಕೆ ಸೇರಿದ ಜ್ಯೋತಿರಾಧಿತ್ಯ ಸಿಂಧಿಯಾ ಮಧ್ಯಪ್ರದೇಶದ ಗುಣಾ ಕ್ಷೇತ್ರದಿಂದ ಸ್ಪರ್ಧೆಗಿಳಿಯಲಿದ್ದಾರೆ. ಪಟಿಯಾಲಾ ಮನೆತನದಿಂದ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಧರ್ಮಪತ್ನಿ ಪ್ರಣೀತ್ ಕೌರ್ಪಟಿಯಾಲ ಕೂಡಾ ಸ್ಪರ್ಧಿಸುತ್ತಿದ್ದಾರೆ.