ಆದಾಯ ತೆರಿಗೆ ಇಲಾಖೆ ಕಳುಹಿಸಿದ ನೋಟಿಸ್ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯ ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ವಿಚಾರಣೆ ನಡೆಸಿದರು.1,823 ಕೋಟಿ ದಂಡದ ಜೊತೆಗೆ ಇನ್ನೂ ಎರಡು ನೋಟಿಸ್ಗಳನ್ನು ಪಡೆದಿದ್ದೇವೆ ಕಾಂಗ್ರೆಸ್ ಹೇಳಿತು. ವಿಚಾರಣೆ ವೇಳೆ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿದ್ದು, ಚುನಾವಣೆಗಳು ನಡೆಯುತ್ತಿರುವುದರಿಂದ ನಾವು ಪಕ್ಷದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಲು ಹೋಗುವುದಿಲ್ಲ ಎಂದಿದ್ದಾರೆ.
ಇದಲ್ಲದೆ, ಲೋಕಸಭೆ ಚುನಾವಣೆ ಮುಗಿಯುವವರೆಗೆ ಐಟಿ ಇಲಾಖೆ ಏನನ್ನೂ ವಸೂಲಿ ಮಾಡುವುದಿಲ್ಲ ಎಂದು ಐಟಿ ಹೇಳಿರುವುದಾಗಿ ಕೇಂದ್ರ ಹೇಳಿದೆ. ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಇದು “ಖುಷಿಯ ಸಂಗತಿ”, ಮಾರ್ಚ್ನಲ್ಲಿ ಮತ್ತು ಅದಕ್ಕೂ ಮೊದಲು ವಿವಿಧ ವರ್ಷಗಳಿಂದ ಸುಮಾರು 3,500 ಕೋಟಿ ಎಲ್ಲಾ ಬೇಡಿಕೆ ನೋಟಿಸ್ಗಳನ್ನು ನೀಡಲಾಗಿದೆ ಎಂದರು.