ಥಿಯೇಟರ್ ಗೆ ಜನ ಬರ್ತಿಲ್ಲ, ಚಿತ್ರಮಂದಿರ ನಡೆಸೋದು ಕಷ್ಟವಾಗ್ತಿದೆ, ಚಿತ್ರೋದ್ಯಮ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಹೀಗಾಗಿಯೇ ಎಷ್ಟೋ ಥಿಯೇಟರ್ ಮಾಲೀಕರು ತಮ್ಮ ಸಿಂಗಲ್ ಸ್ಕ್ರೀನಿಂಗ್ ಚಿತ್ರಮಂದಿರಗಳನ್ನ ಮುಚ್ಚುತ್ತಿದ್ದಾರೆ ಅನ್ನೋ ಸುದ್ದಿನಾ ನೀವೆಲ್ಲರೂ ಕೇಳಿದ್ದೀರಿ, ಥಿಯೇಟರ್ ಕ್ಲೋಸ್ ಆಗೋದನ್ನ ನೋಡ್ತಿದ್ದೀರಿ. ಆದ್ರೀಗ ತೆಲಂಗಾಣದಲ್ಲಿ ಅಂಗಳದಲ್ಲಿ ಭರ್ತಿ 400 ಚಿತ್ರಮಂದಿರಗಳ ಬಾಗಿಲಿಗೆ ಬೀಗ ಹಾಕಲಾಗ್ತಿದೆ. ಆದರೆ ಶಾಶ್ವತವಾಗಿ ಅಲ್ಲ ಬದಲಾಗಿ 14 ದಿನಗಳ ಕಾಲ ಮಾತ್ರ ಸಿಂಗಲ್ ಸ್ಕ್ರೀನಿಂಗ್ ಚಿತ್ರಮಂದಿರಗಳನ್ನ ಕ್ಲೋಸ್ ಮಾಡಲಾಗ್ತಿದೆಯಂತೆ
ಹೌದು, ಮೇ 17 ರಿಂದ ಸುಮಾರು 400 ಚಿತ್ರಮಂದಿರಗಳಿಗೆ ಬೀಗ ಜಡಿಯಲಾಗ್ತಿದೆ. ಬಿಗ್ ಸ್ಟಾರ್ ಗಳ ಸಿನಿಮಾಗಳಿಲ್ಲದ ಕಾರಣಕ್ಕೆ ಥಿಯೇಟರ್ ಖಾಲಿ ಹೊಡೆಯುತ್ತಿವೆಯಂತೆ.
ಥಿಯೇಟರ್ ಮೆಂಟೇನೆನ್ಸ್ ಮಾಡೋದು ಕಷ್ಟವಾಗ್ತಿದೆಯಂತೆ.
ಹೀಗಾಗಿ, ಎರಡು ವಾರಗಳ ಮಟ್ಟಿಗಾದ್ರೂ ಬಂದ್ ಮಾಡುವ ನಿರ್ಧಾರಕ್ಕೆ ತೆಲಂಗಾಣ ಸಿನಿಮಾ ಪ್ರದರ್ಶಕರು ಮುಂದಾಗಿದ್ದಾರಂತೆ. ಈ ಬಗ್ಗೆ ಖುದ್ದು ತೆಲಂಗಾಣದ ಪ್ರದರ್ಶಕ ವಲಯದ ಅಧ್ಯಕ್ಷ ವಿಜಯೇಂದ್ರ ರೆಡ್ಡಿ ಹೇಳಿಕೆ ನೀಡಿದ್ದಾರೆ. ಸದ್ಯ ತೆಲಂಗಾಣ ವಿತರಕರು ನಿರ್ಧಾರ ಕೈಗೊಂಡಿದ್ದಾರೆ. ಇನ್ನೂ ಆಂಧ್ರದಲ್ಲೂ ಕೂಡ ಎರಡು ವಾರಗಳ ಕಾಲ ಥಿಯೇಟರ್ ಕ್ಲೋಸ್ ಮಾಡುವ ಕುರಿತು ಚರ್ಚೆ ನಡೀತಿದೆ.
ಇತ್ತ ಕರ್ನಾಟಕ ಸಿನಿಮಾ ವಿತರಕರು ಕೂಡ ಮೀಟಿಂಗ್ ಮಾಡಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಅಂದ್ಹಾಗೇ,
ಓಟಿಟಿ..ಡಿಜಿಟಲ್ ಪ್ಲಾಟ್ ಫಾರಂ ಹಾವಳಿಯಿಂದ ಸಿಂಗಲ್ ಸ್ಕ್ರೀನಿಂಗ್ ಚಿತ್ರಮಂದಿರಗಳು ಬಂದ್ ಆಗುವಂತಹ, ಮುಚ್ಚುವಂತಹ ಸ್ಥಿತಿ ನಿರ್ಮಾಣವಾಗಿದೆ.. ..