ಧಾರವಾಡ; ಮಾವು ಮೇಳ ಭರ್ಜರಿಯಾಗಿದ್ದು ಮಾವುಗಳ ಪ್ರದರ್ಶನ, ವ್ಯಾಪಾರ ನಡೆಯುತ್ತಿದೆ. ಹಲವಾರು ತಳಿಯ ಮಾವಿನ ಹಣ್ಣುಗಳು ಮಾರಾಟವಾಗುತ್ತಿದ್ದು, ಈ ಪೈಕಿ ”ಮಿಯಾಜಾಕಿ” ತಳಿಯ ಒಂದು ಮಾವಿನ ಹಣ್ಣಿಗೆ ಬರೋಬ್ಬರಿ 10,000 ರೂಪಾಯಿಗೆ ಇದೆ! ಈ ಮಾವಿನ ಹಣ್ಣು ಈಗ ಮೇಳದ ಕೇಂದ್ರ, “ಯೂನಿಕ್ ಐಕಾನ್” ಇದನ್ನು ನೋಡಲೆಂದೇ ಸಾವಿರಾರು ಜನ ಸೇರುತ್ತಿದ್ದಾರೆ.
ಜಪಾನ್ ಮೂಲದ ತಳಿ
ಗಾಂವ್ಕರ್ 1985 ರಿಂದಲೂ ಮಾವಿನ ಹಣ್ಣಿನ ಮಾರಾಟದಲ್ಲಿದ್ದು ಜಪಾನ್ ಮೂಲದ ತಳಿಯ ಈ ಮಾವಿನ ಮರವು ಸ್ಥಳೀಯ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಪ್ರತಿ ಮರವು ಋತುವಿಗೆ ಗರಿಷ್ಠ 14 ಹಣ್ಣುಗಳನ್ನು ನೀಡುತ್ತದೆ. ಇತ್ತೀಚೆಗೆ ಸುಮಾರು 2.5 ಲಕ್ಷ ರೂ.ಗೆ ಹತ್ತಾರು ಮಾವಿನ ಹಣ್ಣು ಮಾರಾಟವಾಗಿತ್ತು. ಅಪರೂಪದ ಈ ಮಾವು ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿರುವ ಕಾರಣ ಬೆಲೆಯೂ ಹೆಚ್ಚಾಗಿದೆ ಎಂದು ತಿಳಿಸದ್ದಾರೆ.
”ಮಿಯಾಜಾಕಿ” ತಳಿಯ ಮಾವಿನ ಹಣ್ಣನ್ನು ಕೊಪ್ಪಳದ ಗ್ರಾಹಕರೊಬ್ಬರಿಗೆ ಪ್ರತಿ ಹಣ್ಣಿಗೆ 10 ಸಾವಿರ ರೂ.ನಂತೆ ಮಾರಾಟ ಮಾಡಿದ್ದೇನೆ. ರಾಜ್ಯದಲ್ಲಿ ಕೆಲವೇ ಖರೀದಿಸುತ್ತಾರೆ. ಇದಲ್ಲಿರುವ ವಿಟಮಿನ್ ಎ, ಬಿ ಮತ್ತು ಸಿ ಹೊಂದಿದೆ. ಹಣ್ಣಿನ ಸೇವನೆ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇತರ ಬೆಳೆಗಾರರಿಗೆ ಅರಿವು ಮೂಡಿಸುವುದಕ್ಕಾಗಿ ಇಲ್ಲಿ ಒಂದು ಹಣ್ಣನ್ನು ಪ್ರದರ್ಶಿಸಿದ್ದೇನಷ್ಟೆ ಎಂದು ಅವರು ಹೇಳಿದ್ದಾರೆ. ಮಿಯಾಜಾಕಿ ತಳಿಯ ಮಾವು ನೇರಳೆ ಮಿಶ್ರಿತ ಕಡು ಕೆಂಪು ಬಣ್ಣದಿಂದ ಕೂಡಿದ್ದು, ಇದನ್ನು ಸೂರ್ಯನ ಮೊಟ್ಟೆ ಎಂದೂ ಕರೆಯುತ್ತಾರೆ. ಪ್ರತಿ ಹಣ್ಣು ಸುಮಾರು 200-350 ಗ್ರಾಂ ತೂಗುತ್ತದೆ.