ಲವ್ ಅನ್ನೊದು ಕಾಮನ್. ಪ್ರಾಯಕ್ಕೆ ಬಂದರೆ ಸಾಕು ಪ್ರೀತಿಯಲ್ಲಿ ಜಾರುವುದು ಸಹಜ. ಪ್ರೀತಿ ಮಾಡಿ ಗೆದ್ದವರು ಇದ್ದಾರೆ. ಆದ್ರೆ ಇಲ್ಲೊಂದು ಪ್ರೀತಿ ಕೊಲೆಯಲ್ಲಿ ಅಂತ್ಯವಾಗಿದೆ.
ಇಬ್ರಾಹಿಂ ಗೌಸ್ (22) ಎಂಬುವನು ತನ್ನ ಪ್ರೇಯಸಿಯನ್ನ ಬೈಕ್ ನಲ್ಲಿ ಸುತ್ತಾಡಿಸುವಾಗ ಪ್ರೇಯಸಿಯ ಅಣ್ಣ ನೋಡಿ ಕೊಲೆಮಾಡಿದ್ದಾನೆ. ಸದ್ಯ ಈ ಘಟನೆ ಬೆಳಗಾವಿಯ ಮಹಾಂತೇಶ ನಗರದ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ.
ಪ್ರೇಯಸಿ ತನ್ನ ಹುಡುಗನ ಜೊತೆ ಸುತ್ತಾಡುವುದನ್ನು ಆಕೆಯ ಅಣ್ಣನ ಕಣ್ಣಿಗೆ ಬಿದ್ದಿದೆ. ಯುವತಿಯ ಸಹೋದರ ಮುಜಮಿಲ್ ಸತ್ತಿಗೇರಿ ಎಂಬಾತ ಇಬ್ರಾಹಿಂ ಗೌಸ್ನನ್ನು ಸ್ಕ್ರೂಡ್ರೈವರ್ ನಿಂದ ಚುಚ್ಚಿ ಹತ್ಯೆಗೈದಿದ್ದಾನೆ. ಈ ಘಟನೆ ನಡೆದ ಬಳಿಕ ಸ್ಥಳೀಯರು ಇಬ್ರಾಹಿಂನನ್ನು ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಮೃತಾಪಟ್ಟಿದ್ದಾನೆ.