ದೇಶದಲ್ಲಿ ಚುನಾವಣೆ ಕಾವು ಇನ್ನೂ ಮುಗಿದಿಲ್ಲ. ಈಗಾಗಲೇ 4 ಹಂತಗಳಲ್ಲಿ ವೋಟಿಂಗ್ ನಡೆದಿದೆ. ಇನ್ನು ಮೂರು ಹಂತದಲ್ಲಿ ವಿವಿಧ ರಾಜ್ಯಗಳಲ್ಲಿ ವೋಟಿಂಗ್ ಬಾಕಿಯಿದೆ.. ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅಭಿವೃದ್ಧಿಗೆ ವೋಟ್ ಮಾಡಿ ಅಂತ ಹೇಳಿದ್ದ ಹೇಳಿಕೆ ವೈರಲ್ ಆಗಿತ್ತು. ಈಗ ರಶ್ಮಿಕಾ ಮಂದಣ್ಣ ಹೇಳಿಕೆಗೆ ಸ್ವತಃ ಪ್ರಧಾನಿ ಮೋದಿ ರಿಯಾಕ್ಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ 10 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮುಂಬೈ ಅಟಲ್ ಸೇತುವೆ ಮೇಲೆ ಕಾರಿನಲ್ಲಿ ಪ್ರಯಾಣಿಸುತ್ತಾ ರಶ್ಮಿಕಾ ಮಂದಣ್ಣ ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ರು. 22 ಕಿಮೀ ಉದ್ದದ ಆರು ಪಥದ ಸೇತುವೆಯು ಪ್ರಯಾಣದ ಸಮಯವನ್ನು 2 ಗಂಟೆಗಳಿಂದ ಕೇವಲ ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಭಾರತವು ದೊಡ್ಡ ಕನಸುಗಳನ್ನ ಹೊಂದಿರಲಿಲ್ಲ ಎನ್ನುತ್ತಿದ್ದರು ಆದರೆ 7 ವರ್ಷಗಳಲ್ಲಿ ಈ ಸೇತುವೆಯ ನಿರ್ಮಾಣ ಪೂರ್ಣಗೊಂಡಿದೆ. ನೂರಾರು ಸೇತುವೆಗಳು ನಿರ್ಮಾಣವಾಗಬೇಕಾದರೆ ಜನರು ಎಚ್ಚೆತ್ತುಕೊಂಡು ಅಭಿವೃದ್ಧಿಗೆ ಮತ ನೀಡಿ ಎಂದು ರಶ್ಮಿಕಾ ಹೇಳಿಕೆ ಕೊಟ್ಟಿದ್ರು. ನಂತರ ಸೌತ್ ಇಂಡಿಯಾ ಟು ನಾರ್ತ್ ಇಂಡಿಯಾ, ವೆಸ್ಟ್ ಇಂಡಿಯಾ ಟು ಈಸ್ಟ್ ಇಂಡಿಯಾ.. ಕನೆಕ್ಟಿಂಗ್ ಹಾರ್ಟ್ಸ್.. ಮೈ ಇಂಡಿಯಾ ಎಂದು ಟ್ವಿಟರ್ನಲ್ಲಿ ಬರೆದು ವಿಡಿಯೋವನ್ನ ಪೋಸ್ಟ್ ಮಾಡಿದ್ದರು.
ಸದ್ಯ ರಶ್ಮಿಕಾ ಮಂದಣ್ಣ ಟ್ವೀಟ್ಗೆ ಪ್ರಧಾನಿ ನರೇಂದ್ರ ಮೋದಿ ರಿಯಾಕ್ಟ್ ಮಾಡಿದ್ದಾರೆ. ರಶ್ಮಿಕಾ ಟ್ವೀಟ್ ರೀ-ಟ್ವೀಟ್ ಮಾಡಿ “ಖಂಡಿತವಾಗಿಯೂ.. ಜನರನ್ನು ಸಂಪರ್ಕಿಸುವುದು ಮತ್ತು ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ಸಂತೃಪ್ತಿ ಮತ್ತೊಂದಿಲ್ಲ” ಎಂದು ನಮೋ ಬರೆದುಕೊಂಡಿದ್ದಾರೆ.