ಆಡಿಟಿ ಸೆಂಟ್ರಲ್ ಎಂಬ ವೆಬ್ಸೆಟ್ನ ವರದಿಯ ಪ್ರಕಾರ ಚೀನಾದಲ್ಲಿರುವ ವಿಶ್ವದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣ ಇದಾಗಿದೆ.
ಏನು ಈ ಮೆಟ್ರೋ ವಿಶೇಷತೆ…?
• 116 ಮೀಟರ್ ಆಳ
• ಈ ಆಳವು 35-40 ಅಂತಸ್ತಿನ ಕಟ್ಟಡಕ್ಕೆ ಸಮಾನವಾಗಿದೆ
• ಈ ನಿಲ್ದಾಣವನ್ನು ಗುಡ್ಡಗಾಡು ಪ್ರದೇಶದಲ್ಲಿ ನಿರ್ಮಿಸಲಾಗಿದೆ
• ಇದರ ನಿರ್ಮಾಣವು 2017 ರಲ್ಲಿ ಪ್ರಾರಂಭವಾಯಿತು ಮತ್ತು ಇದು 2022 ರಲ್ಲಿ ಸಿದ್ಧವಾಯಿತು.
ಸದ್ಯ ಚೀನಾದಲ್ಲಿರುವ ವಿಶ್ವದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣ ಇದನ್ನು ‘ಹಾಂಗ್ಯಾನ್ಕುನ್ ಮೆಟ್ರೋ ಸ್ಟೇಷನ್’ ಎಂದು ಕರೆಯಲಾಗುತ್ತದೆ. ಈ ಮೆಟ್ರೋ ನಿಲ್ದಾಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ವಿಡಿಯೋ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಒಟ್ಟು ಏಳು ಎಸ್ಕಲೇಟರ್ಗಳಿಂದ ಇಳಿದ ನಂತರ, ಈ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ ಕಾಣಬಹುದು. ಈ ವಿಡಿಯೋ ನೋಡಿದಾಕ್ಷಣ ಒಂದು ಕ್ಷಣ ನಿಮಗೆ ಕನ್ಫೂಷನ್ ಆಗುವುದಂತೂ ಖಂಡಿತಾ.
ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ Instagram ನಲ್ಲಿ jen_l104 ಹೆಸರಿನ ID ಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಹಂಚಿಕೊಂಡ ಕೇವಲ 4 ದಿನಗಳಲ್ಲಿ 17 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ. ಆದ್ದರಿಂದ ಇದನ್ನು ನಿರ್ಮಿಸಲು ತುಂಬಾ ಆಳವಾಗಿ ಅಗೆಯಬೇಕಾಯಿತು ಎಂದು ಹೇಳಲಾಗುತ್ತಿದೆ.