- ನಾಳೆ ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ
- ಮತದಾನದ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿದ ಶಾರುಕ್
ಲೋಕಸಭಾ ಚುನಾವಣೆ ಕಾವು ಜೋರಾಗಿದ್ದು, ನಾಳೆ ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಮತದಾನದ ಹಕ್ಕನ್ನು ಚಲಾಯಿಸಿ ಎಂದು ಬಾಲಿವುಡ್ ಸೂಪರ್ಸ್ಟಾರ್ ಶಾರುಕ್ ಖಾನ್ ಅವರು ಜನರಿಗೆ ಮನವಿ ಮಾಡಿದ್ದಾರೆ.
ಮುಂಬೈನ ಆರು ಕ್ಷೇತ್ರದ ಮತ್ತು ಮಹಾರಾಷ್ಟ್ರದ ಉಳಿದ 7 ಕ್ಷೇತ್ರಗಳ ಜನರು ನಾಳೆ ಮತ ಚಲಾಯಿಸಲಿದ್ದಾರೆ. ಮತದಾನದ ಕುರಿತು ಶಾರುಕ್ ಪೋಸ್ಟ್ ಮಾಡಿದ್ದು, ಜವಾಬ್ದಾರಿಯುತ ಭಾರತೀಯ ಪ್ರಜೆಗಳಾದ ನಾವು ಈ ಸೋಮವಾರ ಮಹಾರಾಷ್ಟ್ರದಲ್ಲಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಭಾರತೀಯರಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ ಮತ್ತು ನಮ್ಮ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸೋಣ. ಮತದಾನ ಮಾಡುವುದು ನಮ್ಮ ಹಕ್ಕು ಎಂದು ಬರೆದುಕೊಂಡಿದ್ದಾರೆ.