ಡಿ ಬಾಸ್ ಅಭಿನಯದ ಡೆವಿಲ್ ಸಿನಿಮಾಗೆ ರಚನಾ ರೈ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದರ್ಶನ್ ಸಿನಿಮಾಗಳಲ್ಲಿ ಕನ್ನಡತಿಯರ ದರ್ಬಾರ್ ಮುಂದುವರೆದಿದೆ. ದರ್ಶನ್ ಅಭಿನಯದ ಬಹುತೇಕ ಸಿನಿಮಾಗಳಲ್ಲಿ ನಟಿಸಿದ ನಟಿಯರು ಕನ್ನಡದವ್ರೇ.
ಯಾವಾಗ ಡಿ ಬಾಸ್ ಸ್ಟಾರ್ ಆಗಿ ಬೆಳೆದ್ರೋ ಆಗಿನಿಂದ ಸಿನಿಮಾ ಟೀಮ್ ಗೆ ದರ್ಶನ್ ಅವರು ಹೇಳೋದು ಒಂದೇ. ಬೇರೆ ಭಾಷೆಯ ಸ್ಟಾರ್ ನಟಿಯರನ್ನ ಸಿನಿಮಾಗೆ ಆಯ್ಕೆ ಮಾಡಬೇಡಿ ಯಾಕಂದ್ರೇ ನಮ್ಮಲ್ಲಿ ಬಹಳ ಟ್ಯಾಲೆಂಟೆಡ್ ನಟಿಯರಿದ್ದಾರೆ ಮೊದಲು ಅವರಿಗೆ ಅವಕಾಶ ಕೊಡಿ.
ಜೊತೆಗೆ ಭಾಷೆ ಬಾರದೇ ಇರುವವರಿಗೆ ಯಾಕೆ ಅವಕಾಶ ಕೊಡಬೇಕು ಅನ್ನೋದು ಡಿ ಬಾಸ್ ಆಲೋಚನೆ. ಹಾಗಾಗಿ ದಚ್ಚು ಅಭಿನಯದ ಸಿನಿಮಾಗಳಿಗೆ ಕನ್ನಡದ ನಟಿಯರೇ ಆಯ್ಕೆ ಆಗ್ತಾರೆ.
ಉದಾಹರಣೆಗೆ ಯಜಮಾನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆಗೆ ಮತ್ತೊಬ್ಬ ಕನ್ನಡತಿ ತಾನ್ಯಾ ಹೋಪ್ ಅವರಿಗೆ ಅವಕಾಶ ಕೊಡಲಾಯ್ತು. ಈ ಸಿನಿಮಾದಿಂದ ತಾನ್ಯಾ ಹೋಪ್ ಅವರಿಗೆ ಹೈಪ್ ಕ್ರಿಯೇಟ್ ಆಯ್ತು.
ಇನ್ನು ದರ್ಶನ್ ಅಭಿನಯದ ಸಿನಿಮಾಗಳಿಗೆ ಬಹುತೇಕ ಹೊಸ ನಟಿಯರನ್ನೇ ಆಯ್ಕೆ ಮಾಡಿ ಸಿನಿಮಾ ಇಂಡಸ್ಟ್ರಿಯಲ್ಲಿ ಅವರಿವೆ ಗಟ್ಟಿಯಾದ ನೆಲೆ ಕಂಡುಕೊಳ್ಳೋಕೆ ಸಹಾಯ ಮಾಡ್ತಾರೆ. ಒಡೆಯ ಸಿನಿಮಾದಲ್ಲಿ ಕನ್ನಡತಿಯಾದ ಸನಾ ತಿಮ್ಮಯ್ಯ ಅವರನ್ನ ಆಯ್ಕೆ ಮಾಡಲಾಗಿತ್ತು.
ಆದಾದ ನಂತರ ಸೂಪರ್ ಹಿಟ್ ಸಿನಿಮಾ ರಾಬರ್ಟ್ ನಲ್ಲೂ ಕೂಡ ಹೊಸ ಪ್ರತಿಭೆಗೆ ಮಣೆ ಹಾಕಲಾಗಿತ್ತು. ಅವರು ಕೂಡ ಕನ್ನಡತಿ ಅನ್ನೋದು ವಿಶೇಷ. ರಾಬರ್ಟ್ ಸಿನಿಮಾ ಮೂಲಕ ಸಿನಿಮಾ ಆಶಾ ಭಟ್ ಕನ್ನಡಕ್ಕೆ ಎಂಟ್ರಿ ಕೊಟ್ರು. ಆ ನಂತರ ಕಳೆದ ವರ್ಷದ ಇಂಡಸ್ಟ್ರಿ ಹಿಟ್ ಕಾಟೇರ ಸಿನಿಮಾದಲ್ಲೂ ಕೂಡ ಮಾಲಾಶ್ರೀ ಮಗಳು ರಾಧನಾ ರಾಮ್ ಅವರಿಗೆ ಅವಕಾಶ ಕೊಡಲಾಯ್ತು.
ಇವ್ರು ಮಾತ್ರವಲ್ಲಿ ಸದ್ಯ ಕನ್ನಡ ಇಂಡಸ್ಟ್ರಿಯ ಸ್ಟಾರ್ ನಟಿಯರಲ್ಲಿ ಒಬ್ಬರಾದ ರಚಿತಾ ರಾಮ್ ಅವರಿಗೂ ಅವಕಾಶ ಕೊಟ್ಟಿದ್ದು ಇದೇ ಡಿ ಬಾಸ್. ಸಿರಿಯಲ್ ನಲ್ಲಿ ನಟಿಸುತ್ತಿದ್ದ ರಚಿತಾ ಅವರಿಗೆ ಬುಲ್ ಬುಲ್ ಸಿನಿಮಾದಲ್ಲಿ ಅವಕಾಶ ಕೊಟ್ರು. ನಂತರ ರಚ್ಚು ಹಿಂದಿರುಗಿ ನೊಡಲೇ ಇಲ್ಲ. ಕನ್ನಡದ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡು ಸ್ಟಾರ್ ನಟಿಯಾಗಿ ಬೆಳೆದ್ರು.
ಈಗ ಮತ್ತೆ ಡೆವಿಲ್ ನಲ್ಲೂ ಕೂಡ ಕನ್ನಡತಿಗೆ ಅವಕಾಶ ಕೊಟ್ಟಿದ್ದಾರೆ ಡಿ ಬಾಸ್.. ಈ ಮೂಲಕ ಡಿ ಬಾಸ್ ಸಿನಿಮಾದಲ್ಲಿ ಕನ್ನಡತಿಯರ ದರ್ಬಾರ್ ಮುಂದುವರೆದಿದೆ.