ಹಾಲು ಕೇಲವೊಬ್ಬರಿಗೆ ತುಂಬಾ ಇಷ್ಟವಾದರೆ, ಇನ್ನೂ ಕೇಲವೊಬ್ಬರಿಗೆ ಹಾಲು ಎನ್ನುವ ಪದ ಕೇಳಿದ್ರೆ ತುಂಬಾ ಭಯ ಆಗುತ್ತೆ. ಹಾಲಿನಿಂದ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ದೊರೆಯುತ್ತದೆ. ಹಾಗಾದ್ರೆ ಕುಡಿಯದವರ ಗತಿಯೇನು ? ಅವರ ದೇಹಕ್ಕೆ ಈ ಕ್ಯಾಲ್ಸಿಯಂ ಪದಾರ್ಥ ಲಭ್ಯವಾಗದ್ದಿದ್ದರೆ ಅರೋಗ್ಯದ ಪರಿಸ್ಥಿತಿ ಏನು ? ಭಯ ಪಡುವ ಯಾವುದೇ ಅವಶ್ಯವಿಲ್ಲ.
ಕ್ಯಾಲ್ಸಿಯಂ ಸತ್ವವು ಹಾಲು, ಮೊಸರು ಮತ್ತು ಪನೀರ್ ಪದಾರ್ಥಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಹೆಚ್ಚಿನ ಪ್ರಮಾಣದ ಜನರು ತಮ್ಮ ಎಲುಬಿಗೆ ಸಂಭಂದಪಟ್ಟ ಸಮಸ್ಯೆಯನ್ನು ನಿವಾರಿಸಲು ಹಲವು ಡೈರಿ ಪದಾರ್ಥಗಳನ್ನು ಸೇವಿಸುತ್ತಾರೆ. ಇಂತಹ ಪದಾರ್ಥಗಳನ್ನು ಸೇವಿಸದ ಜನರಿಗೆ ಕ್ಯಾಲ್ಸಿಯಂ ಸಂಭಂದಪಟ್ಟ ರೋಗಗಳು ಕಾಣಿಸುತ್ತದೆ. ಇಂತಹ ಸಮಸ್ಯೆಯನ್ನು ನಿವಾರಿಸಲು ಹಾಲನ್ನು ಹೊರತುಪಡಿಸಿ ಹಲವಾರು ಪದಾರ್ಥಗಳಿವೆ.
ಸೋಯಾಬಿನ್ : ಈ ಪದಾರ್ಥ ಪ್ರೋಟಿನ್ ಜೊತೆ ಅಪಾರ ಪ್ರಮಾಣದ ಕ್ಯಾಲ್ಸಿಯಂ ಸತ್ವವನ್ನು ಹೊಂದಿದೆ.
ಡ್ರೈ ಫ್ರೂಟ್ಸ್ : ಡ್ರೈ ಫ್ರೂಟ್ಸ್ಅನ್ನು ಕ್ಯಾಲ್ಸಿಯಂನ ಖಜಾನೆ ಎಂದು ಕರೆಯುತ್ತಾರೆ. ಇದರ ಸೇವನೆಯಿಂದ ಮೆದುಳು ಮತ್ತು ಹೃದಯ ಸಂಭಂದಿ ಕಾಯಿಲೆಯನ್ನು ವಾಸಿ ಮಾಡಬಹುದು.
ಸೊಪ್ಪುಗಳು : ಹಸಿರು ಎಲೆಯ ಸೊಪ್ಪುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾಲ್ಸಿಯಂ ಸಂಭಂದಿತ ಸಮಸ್ಯೆಯಿಂದ ದೂರವಿರಬಹುದು.
ನಿಮಗೆ ಡೈರಿ ಪದಾರ್ಥಗಳು ಇಷ್ಟವಾಗದಿದ್ದರೆ ಈ ಆಹಾರ ಪದಾರ್ಥಗಳನ್ನು ಸೇವಿಸಿ. ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ