IPL 2024 ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿಇದು ಆರ್ಸಿಬಿಯ ಹೊಸ ಅಧ್ಯಾಯ ಎಂದು ಹೇಳುವು ಮೂಲಕ RCB ಹವಾ ಸೃಷ್ಟಿಸಿತ್ತು. ಈ ಮಾತಿಗೆ ತಕ್ಕಂತೆ ಮೊದಲ ಹಂತದಲ್ಲಿRCB ಆಟಗಾರರುಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ರು. 7 ಸೋಲು ಕಂಡು ಇನ್ನೇನು IPL ನಿಂದ ಹೊರ ಬೀಳುತ್ತೆ ಅಂತಾ RCB ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಇದು ಮುಗಿದು ಹೋದ ಅಧ್ಯಾಯ ಎಂದು ಬೇಸರ ಹೊರಹಾಕಿದ್ದರು.
ಆದರೆ ಆ ಬಳಿಕ ನಡೆದದ್ದೇ ಬೇರೆ. ಪವಾಡ ಸಂಭವಿಸಿದೆ ಆರ್ಸಿಬಿ ಸತತವಾಗಿ 6 ಪಂದ್ಯಗಳನ್ನು ಒಟ್ಟು 7 ಪಂದ್ಯಗಳಲ್ಲಿ ಜಯ ಸಾಧಿಸಿ ಕೊನೆಯ ಸ್ಥಾನದಿಂದ ಮೇಲೆದ್ದು ಅಚ್ಚರಿ ಎಂಬಂತೆ ಪ್ಲೇ ಆಫ್ ಪ್ರವೇಶಿಸಿತ್ತು. ಇದೀಗ ಬುಧವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್(RCB vs RR) ವಿರುದ್ಧ ಆಡಲಿದೆ.
ಆರ್ಸಿಬಿ ತಂಡದ ಆಟಗಾರರು ರಾಜಸ್ಥಾನ್ ವಿರುದ್ಧ ಎಲಿಮಿನೇಟರ್ ಪಂದ್ಯವನ್ನಾಡಲು ಈಗಾಗಲೇ ಅಹಮದಾಬಾದ್ಗೆ ತಲುಪಿದ್ದಾರೆ. ಸೋಮವಾರ ಆಟಗಾರರು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಫುಟ್ಬಾಲ್ ಆಡುವ ಮೂಲಕ ದೈಹಿಕ ಕಸರತ್ತು ನಡೆಸಿ ಈ ಸಲ ಕಪ್ ನಮ್ಮದೆ ಅಂತಾ ಎದುರಾಳಿ ಎದುರಾಳಿ ತಂಡಗಳಿಗೆ ಖಡಕ್ ವಾರ್ನ್ ಮಾಡುತ್ತಿದ್ದಾರೆ. ಆಟಗಾರರು 2 ತಂಡಗಳಾಗಿ ಫುಟ್ಬಾಲ್ ಆಡಿದ ವಿಡಿಯೊವನ್ನು ಆರ್ಸಿಬಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ.