ಮಹೇಂದ್ರ ಸಿಂಗ್ ಧೋನಿಯ ಐಪಿಎಲ್ ನಿವೃತ್ತಿ ಬಗ್ಗೆ ಒಂದರ ಹಿಂದೆ ಒಂದರಂತೆ ಸುದ್ದಿ ಹರಿದಾಡುತ್ತಿದೆ. ಮಾಹಿ ನಿವೃತ್ತಿ ನೀಡಲ್ಲ? ನೀಡುತ್ತಾರೆ? ಎಂಬ ಗೊಂದಲವು ಸಾಕಷ್ಟು ಜನರಲ್ಲಿದೆ. ಆದರೆ ಮಾಹಿ ಮಾತ್ರ ಸದ್ಯ ಇದಾವುಕ್ಕೆ ಉತ್ತರ ನೀಡಿಲ್ಲ. ಸದ್ಯ ಕಾಲಿನ ಗಾಯಕ್ಕೆ ಲಂಡನ್ ಹೋಗಲು ಸಜ್ಜಾಗಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಇದಕ್ಕೆ ಉತ್ತರಿಸಲಿದ್ದಾರೆ. ಅದಕ್ಕೆಂದೇ ಎರಡು ತಿಂಗಳು ಕಾಲಾವಕಾಶ ಕೇಳಿದ್ದಾರೆ. ಆದರೀಗ ಅವರ ನಿವೃತ್ತಿ ವಿಚಾರದ ಬೆನ್ನಲ್ಲೇ ಮಾಹಿಯನ್ನು ಬಿಸಿಸಿಐ ಸಂಪರ್ಕ ಮಾಡಿದೆ ಎನ್ನಲಾಗುತ್ತಿದೆ. ಕಾರಣ ಟೀಂ ಇಂಡಿಯಾದ ಮುಖ್ಯ ಕೋಚ್ ನೇಮಕ ವಿಚಾರವಾಗಿ ಅವರ ಸಹಾಯ ಯಾಚಿಸುತ್ತಿದೆ.
ಮುಂಬರುವ ಜೂನ್ ತಿಂಗಳಿನಲ್ಲಿ ಟಿ20 ವಿಶ್ವಕಪ್ ನಂತರ ಟೀ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ನಿವೃತ್ತಿಯಾಗಲಿದ್ದಾರೆ. ಈಗ ಟೀಮ್ ಇಂಡಿಯಾಗೆ ಹೊಸ ಕೋಚ್ ಯಾರು ಅನ್ನೋದು ಇನ್ನು ಪ್ರಶ್ನೇಯಾಗಿಯೆ ಉಳಿದಿದೆ.
ಮಾಹಿ ಜೊತೆ BCCI ಮಾತು ಏನು..?
ಸದ್ಯ ಈ ವಿಚಾರದಲ್ಲಿ BCCI ಮಹೇಂದ್ರ ಸಿಂಗ್ ಧೋನಿಯವರ ಸಹಾಯ ಕೇಳಿದೆ ಕಾರಣ. ಸಿಎಸ್ಕೆ ಕೋಚ್ ಮತ್ತು ನ್ಯೂಜಿಲ್ಯಾಂಡ್ ತಂಡದ ಕೋಚ್ ಆಗಿರುವ ಸ್ಟೀಫನ್ ಫ್ಲೆಮಿಂಗ್ ಅವರನ್ನು ನೇಮಿಸಲು ಭಾರತೀಯ ಕ್ರಿಕೆಟ್ ಮಂಡಳಿಯ ಮೊದಲ ಆಯ್ಕೆಯಾಗಿದೆ. ಇನ್ನು ಸ್ಟೀಫನ್ ಫ್ಲೆಮಿಂಗ್ ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ದಕ್ಷಿಣಾ ಆಫ್ರಿಕಾದ ಜೋಬರ್ಸ್ ಸೂಪರ್ ಕಿಂಗ್ಸ್ನ ಮುಖ್ಯಸ್ಥರಾಗಿದ್ದಾರೆ. ಮಾತ್ರವಲ್ಲದೆ, ದಿ ಹಂಡ್ರೆಡ್ನಲ್ಲಿ ಸದರ್ನ್ ಬ್ರೇವ್ನ ಮುಖ್ಯ ತರಬೇತುದಾರರಾಗಿದ್ದಾರೆ.
ಕೋಚ್ ರೇಸ್ ಲ್ಲಿರೋ ಪ್ರಮುಖರು
ಇನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ರೇಸ್ ಲ್ಲಿ ಅನೇಕರ ಹೆಸರು ಕೂಡ ಕೇಳಿಬರುತ್ತಿದೆ. ಅದರಲ್ಲು ವಿ ಎಸ್ ಲಕ್ಷ್ಮಣ್, ಗೌತಮ್ ಗಂಭೀರ್ ಜೊತೆಗೆ ಮುಖ್ಯವಾಗಿ *ಧೋನಿ ಹೆಸರು ಕೂಡ ಕೇಳಿಬರುತ್ತಿದೆ.* ಮಾತ್ರವಲ್ಲದೆ ಕ್ರಿಕೆಟ್ ಅಭಿಮಾನಿಗಳು ಕೂಡ ಈ ಹುದ್ದೆಗೆ ಅಪ್ಲಿಕೇಶನ್ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.