ನವಜಾತ ಶಿಶು ಕೊಲೆ ಪ್ರಕರಣದಲ್ಲಿ ಪ್ರೇಮ ಪಕ್ಷಿಗಳು ಖಾಕಿ ಬಲೆಗೆ ಬಿದಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ನಡೆದ ಘಟನೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ನಡೆದ ಒಂದು ಹೃದಯವಿದ್ರಾವಕ ಘಟನೆ. 8 ವರ್ಷಗಳ ಪ್ರೇಮ ಸಂಬಂಧ ಹೊಂದಿದ್ದ ಜೋಡಿ, ಮಹಾಬಳೇಶ್ ಕಾಮೋಜಿ (31) ಮತ್ತು ಸಿಮ್ರಾನ್ ಮಾಣಿಕಬಾಯಿ (22), ತಾವೇ ಹೆತ್ತ ನವಜಾತ ಶಿಶುವನ್ನು ಕೊಂದು ತಿಪ್ಪೆಗೆ ಎಸೆದ ಆರೋಪದಲ್ಲಿ ಬಂಧನಗೊಂಡಿದ್ದಾರೆ.
ತಾವೆ ಹೆತ್ತ ನವಜಾತ ಶಿಶುವಿನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಲವ್ ಬರ್ಡ್ಸ್:
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ನಡೆದ ಘಟನೆ.ನವಜಾತ ಶಿಶು ಕೊಲೆ ಪ್ರಕರಣದಲ್ಲಿ ಪ್ರೇಮ ಪಕ್ಷಿಗಳು ಖಾಕಿ ಬಲೆಗೆ ಬಿದಿದ್ದಾರೆ. ಅಂಬಡಗಟ್ಟಿ ಗ್ರಾಮದ ಮಹಾಬಳೇಶ ಕಾಮೋಜಿ (31) ಸಿಮ್ರಾನ್ ಮಾಣಿಕಬಾಯಿ (22)ಇವರನ್ನು ಬಂಧಿಸಲಾಗಿದೆ.
ಮಹಾಬಳೇಶ್ ಮತ್ತು ಸಿಮ್ರಾನ್ ಅಂಬಡಗಟ್ಟಿ ಗ್ರಾಮದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ದೀರ್ಘಕಾಲದ ಪ್ರೇಮ ಸಂಬಂಧದ ನಡುವೆ ಅವರು ಮದುವೆಗೆ ಮುನ್ನವೇ ಹಲವಾರು ಬಾರಿ ದೈಹಿಕ ಸಂಪರ್ಕ ಹೊಂದಿದ್ದರು. ಇದರ ಪರಿಣಾಮವಾಗಿ ಸಿಮ್ರಾನ್ ಗರ್ಭಿಣಿಯಾದರು. ಆದರೆ, ಗರ್ಭಧಾರಣೆಯ ಬಗ್ಗೆ ಇಬ್ಬರಿಗೂ ಸ್ಪಷ್ಟ ತಿಳುವಳಿಕೆ ಇರಲಿಲ್ಲ. ಸಿಮ್ರಾನ್ ತನ್ನ ದೇಹದ ಬದಲಾವಣೆಯನ್ನು ಗಮನಿಸಿದರೂ, ಮೊಬೈಲ್‌ನಲ್ಲಿ ಸೆಲ್ಫ್ ಡಿಲಿವರಿ ವೀಡಿಯೊ ನೋಡಿ ಗುಟ್ಟಾಗಿ ಬಾತರೂಂನಲ್ಲಿ ಮಗುವಿಗೆ ಜನ್ಮ ನೀಡಿದರು. ಹುಟ್ಟಿದ 20 ದಿನಗಳ ನಂತರ, ಮಹಾಬಳೇಶ್ ಮಗುವನ್ನು ಕೊಂದು ತಿಪ್ಪೆಗೆ ಎಸೆದಿದ್ದಾರೆ ಎಂದು ಪೊಲೀಸರು ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ.
ತಿಪ್ಪೆಯಲ್ಲಿ ನವಜಾತ ಶಿಶುವಿನ ಶವವನ್ನು ಗ್ರಾಮಸ್ಥರು ಗಮನಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಸಿಮ್ರಾನ್‌ಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಅವಳು ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಳು ಎಂದು ದೃಢಪಟ್ಟಿತು. ತನಿಖೆಯ ಒತ್ತಡದಲ್ಲಿ ಇಬ್ಬರೂ ತಮ್ಮ ಮಗುವನ್ನು ಕೊಂದ ಸತ್ಯವನ್ನು ಒಪ್ಪಿಕೊಂಡರು. ಪ್ರಸ್ತುತ ಇಬ್ಬರನ್ನೂ ಕಿತ್ತೂರು ಪೊಲೀಸರು ಬಂಧನ ಮಾಡಿದ್ದಾರೆ.