ಆರ್ಸಿಬಿಸತತ 6 ಪಂದ್ಯಗಳನ್ನ ಗೆದ್ದು ರಣರೋಚಕ ರೀತಿಯಲ್ಲಿ ಪ್ಲೇ ಆಫ್ ಎಂಟ್ರಿ ಕೊಟ್ಟಾಗಿದೆ. ಸದ್ಯದ ಫಾರ್ಮ್ ನೋಡಿದವರೆಲ್ಲರೂ ಈ ಸೀಸನ್ನಲ್ಲಿ ಕಪ್ ಆರ್ಸಿಬಿ ಅಂತಿದ್ದಾರೆ. ಕಾರಣ ಏನು..? 2009, 2011, 2016ರ ಸೀಸನ್ ಇತಿಹಾಸ ಹೇಳೋದೆನು..
ಫೈನಲ್ ಗೆ ಆರ್ಸಿಬಿ ಪಕ್ಕಾ
ಪ್ಲೇ ಆಪ್ ಗೆ ರಾಯಲ್ ಎಂಟ್ರಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರೂ ವಿಭಾಗದಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡ್ತಾ ಇರೋ ಆರ್ಸಿಬಿ ಆಟ ನೋಡುಗರಿಗೆ ಪುಲ್ ಕಿಕ್ ಕೊಡ್ತಾ ಇದೆ. RCB ಪ್ಲೇಯರ್ಸ್ ಆಟಕ್ಕೆ ಎಲ್ರೂ ದಂಗಾಗಿದ್ದು, ಈ ಸಲ ಕಪ್ ನಮ್ಮದೆ ಅಂತಿದ್ದಾರೆ ಆರ್ ಸಿ ಬಿ ಡೈ ಹಾರ್ಡ್ ಪ್ಯಾನ್ಸ್.
2009ರ IPL- ಏನಾಗಿತ್ತು ಗೊತ್ತಾ
ಅದು ಸೌತ್ ಆಫ್ರಿಕಾದಲ್ಲಿ ನಡೆದ 2009ರ ಐಪಿಎಲ್ ಟೂರ್ನಿ.. ಈ ಸೀಸನ್ನಲ್ಲಿ ಮೊದಲ ಪಂದ್ಯ ಗೆದ್ದ ಆರ್ಸಿಬಿ, ಬಳಿಕ ಸತತ 4 ಪಂದ್ಯ ಸೋತಿತ್ತು. ಆ ಬಳಿಕ ಮತ್ತೆ 3 ಪಂದ್ಯ ಗೆದ್ದು, ಮತ್ತೆರೆಡು ಪಂದ್ಯಗಳಲ್ಲಿ ಮುಗ್ಗರಿಸಿತ್ತು. ಆಗಲೂ ರಾಯಲ್ ಕಮ್ಬ್ಯಾಕ್ ಮಾಡಿದ್ದ, ಆರ್ಸಿಬಿ ಸತತ 5 ಪಂದ್ಯಗಳಲ್ಲಿ ಜಯ ಸಾಧಿಸಿ ಫೈನಲ್ಗೆ ಎಂಟ್ರಿ ಕೊಟ್ಟಿತ್ತು.
2011ರ IPLನ ಇತಿಹಾಸ
2011ರ IPLನ ಮೊದಲ ಪಂದ್ಯ ಗೆದ್ದು ಆರ್ಸಿಬಿಭರ್ಜರಿ ಆರಂಭ ಪಡೆದುಕೊಂಡಿತ್ತು. ಆದ್ರೆ, ಆ ಬಳಿಕ ಸೋಲಿನ ಸುಳಿಗೆ ಸಿಲುಕಿತ್ತು. ಅಂತಿಮವಾಗಿ ಸತತ 7 ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಜಯ ಸಾಧಿಸಿದ್ದ ಆರ್ಸಿಬಿ ಟೇಬಲ್ ಟಾಪರ್ ಆಗಿ ಪ್ಲೇ ಆಫ್ಗೆ ರಾಯಲ್ ಎಂಟ್ರಿ ಕೊಟ್ಟಿತ್ತು. ಕ್ವಾಲಿಫೈಯರ್ 1ನಲ್ಲಿ ಸೋತ್ರೂ, ಕ್ವಾಲಿಫೈಯರ್ 2ನಲ್ಲಿ ಗೆದ್ದು ಫೈನಲ್ಗೂ ಎಂಟ್ರಿ ನೀಡಿತ್ತು. ಆದ್ರೆ, ದುರಾದೃಷ್ಟ ಮತ್ತೆ ಫೈನಲ್ಸ್ನಲ್ಲಿ ಚೆನ್ನೈ ಎದುರು ಮುಗ್ಗರಿಸಿತ್ತು.
2016ರ ಸೋಲು-ಗೆಲುವಿನ ರುಚಿ
2016ರ ಐಪಿಎಲ್ ಟೂರ್ನಿಯಲ್ಲೂ ಆರ್ಸಿಬಿ ಆರಂಭದಲ್ಲಿ ಸೋಲು-ಗೆಲುವಿನ ರುಚಿಯುಂಡಿತ್ತು. ಈ ಆಟ ನೋಡಿ ಪ್ಲೇ ಆಫ್ ಎಂಟ್ರಿ ಕಷ್ಟ ಎಂಬ ಮಾತು ಶುರುವಾಗಿತ್ತು. ಈ ಸಮಯದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದ್ದ ಆರ್ಸಿಬಿ ಸತತ 5 ಪಂದ್ಯ ಗೆದ್ದು ಫೈನಲ್ಸ್ ತಲುಪಿತ್ತು. ಆದ್ರೆ, ಹೋಮ್ಗ್ರೌಂಡ್ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ಎದುರು 8 ರನ್ ಅಂತರದಲ್ಲಿ ಸೋಲಿಗೆ ಶರಣಾಗಿಬಿಡ್ತು.
3 ವರ್ಷದ ಸೀಸನ್ ಸೇಡು.. 3 ಕ್ಕೆ ಮುಕ್ತಾಯ
ಸದ್ಯ ಈ ಸೀಸನ್ನಲ್ಲೂ ಸತತ 6 ಜಯ ದಾಖಲಿಸಿ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದೆ. ಫಾಫ್ ಡುಪ್ಲೆಸಿ ಪಡೆಯ ಅಬ್ಬರದ ಆಟ ನೋಡಿದ್ರೆ, ಫೈನಲ್ಸ್ಗೆ ಎಂಟ್ರಿ ಕೊಡೋದು ಖಂಡಿತಾ. ಆದ್ರೆ, ಸತತ 5ಕ್ಕೂ ಹೆಚ್ಚು ಪಂದ್ಯಗಳನ್ನ ಗೆದ್ದು, ಪ್ಲೇ ಆಫ್ ತಲುಪಿದ 3 ಬಾರಿಯೂ ಫೈನಲ್ನಲ್ಲಿ ಸೋಲುಂಡಿದೆ. 3ಕ್ಕೆ ಮುಕ್ತಾಯ ಹಾಡಿ ಈ ಬಾರಿ ಕಪ್ ಗೆಲುವಿನ ಬರಕ್ಕೆ ಬ್ರೇಕ್ ಹಾಕಲಿ ಅನ್ನೋದು ಆರ್ಸಿಬಿ ಫ್ಯಾನ್ಸ್ ಆಶಯ.