- ಬಯಲಾಟ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಶ್ರೀರಾಮುಲು
- ಪಾತ್ರಧಾರಿಗಳೊಂದಿಗೆ ಖಡ್ಗ ಹಿಡಿದು ಕುಣಿದ ಶ್ರೀರಾಮುಲು
ಬಳ್ಳಾರಿಯ ಹಡ್ಲಿಗಿ ಗ್ರಾಮದಲ್ಲಿ ಆಯೋಜಿಸಿದ್ದ ಬಯಲಾಟ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀರಾಮುಲು ಕುಣಿದು ಕುಪ್ಪಳಿಸಿದರು. ವೇದಿಕೆಯ ಮೇಲೆ ಪಾತ್ರಧಾರಿಗಳೊಂದಿಗೆ ಖಡ್ಗ ಹಿಡಿದು ಶ್ರೀರಾಮುಲು ಅವರನ್ನು ನೋಡಿ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ.
ಕರ್ನಾಟಕ ಜಾನಪದ ಕಲೆಗಳಲ್ಲಿ ಬಯಲಾಟವು ಒಂದಾಗಿದೆ. ಈ ಬಯಲಾಟ ಉತ್ತರ ಕನ್ನಡದಲ್ಲಿ ಪ್ರಸಿದ್ಧ. ಊರ ಜಾತ್ರೆ, ಸಮಾರಂಭ ಕಾರ್ಯಕ್ರಮದಲ್ಲಿ ಬಯಲಾಟ ನಡೆಸಲಾಗುತ್ತದೆ. ಬಯಲಾಟ ಪಾತ್ರಧಾರಿಗಳು ಭರ್ಜರಿ ವೇಷಭೂಷಣ ಧರಿಸಿ ಭವ್ಯವಾದ ರಂಗಮಂಟಪದಲ್ಲಿ ಉದ್ದವಾದ ಮಾತುಗಾರಿಕೆ, ಹಾಸ್ಯ , ಸಂಗೀತದ ಮೂಲಕ ಪ್ರೇಕ್ಷರರನ್ನು ಮನರಂಜಿಸುತ್ತಾರೆ.