- 6ನೇ ಹಂತದ ಮತದಾನದಲ್ಲಿ ಹಲವು ಗಣ್ಯರಿಂದ ಮತ ಚಲಾವಣೆ
- ಮತ ಚಲಾಯಿಸಿದ ದ್ರೌಪದಿ ಮುರ್ಮು, ಜಗದೀಪ್ ಧನಕರ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ
ದೆಹಲಿ : ಇಂದು ಲೋಕಸಭೆ ಚುನಾವಣೆ 6ನೇ ಹಂತದ ಮತದಾನದಲ್ಲಿ ಈವರೆಗೆ ಹಲವು ಗಣ್ಯರು ಮತ ಚಲಾಯಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಮ್ಮ ಮತ ಚಲಾಯಿಸಿದರು.
ದೆಹಲಿಯ ಗಣ್ಯ ಮತಗಟ್ಟೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿ ಮತದಾನ ಮಾಡಿದರು. ಇನ್ನೊಂದು ಕಡೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮತ ಚಲಾಯಿಸಿದರು. ಪ್ರಿಯಾಂಕ ಗಾಂಧಿ ಹಾಗೂ ಅವರ ಮಕ್ಕಳಾದ ರೆಹಾನ್ ಮತ್ತು ಮಿರಾಯಾ ತಮ್ಮ ಮತಗಳನ್ನು ಚಲಾಯಿಸಿದರು.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ ಚಲಾಯಿಸಿ, ಮತದಾನ ಒಂದು ಜವಾಬ್ದಾರಿ ಮತ್ತು ಅಧಿಕಾರವಾಗಿದೆ. ಭಾರತವು ವಿಶ್ವದ ವೈವಿಧ್ಯಮಯ, ಸಕ್ರಿಯ ಮತ್ತು ಪರಿಣಾಮಕಾರಿ ಪ್ರಜಾಪ್ರಭುತ್ವವಾಗಿದೆ. ಎಂದು ಹೇಳಿದರು.
ದೆಹಲಿಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಮ್ಮ ಮತ ಚಲಾಯಿಸಿದರು. ಮತಗಟ್ಟೆಯಲಲಿ ಮೊದಲ ಪುರುಷ ಮತದಾರರಾಗಿದ್ದ ಕಾರಣ ಅವರು ಈ ಮತದಾನಕ್ಕಾಗಿ ಪ್ರಮಾಣಪತ್ರವನ್ನು ಪಡೆದರು. ಈ ಬೂತ್ನಲ್ಲಿ ನಾನು ಮೊದಲ ಪುರುಷ ಮತದಾರನಾಗಿದ್ದೇನೆ ಎMದು ಜೈಶಂಕರ್ ತಮ್ಮ ಪ್ರಮಾಣಪತ್ರವನ್ನು ಹಿಡಿದುಕೊಂಡು ಫೋಟೋ ತೆಗೆಸಿ, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಯಾವ ರಾಜ್ಯಗಳ ಎಷ್ಟು ಕ್ಷೇತ್ರಗಳಲ್ಲಿ ಮತದಾನ
ಆರನೇ ಹಂತದಲ್ಲಿ 5. 84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು, 5120 ತೃತೀಯ ಲಿಂಗಿಗಳು ಸೇರಿ ಒಟ್ಟು 11.13 ಕೋಟಿ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬಿಹಾರದ 8 ಸ್ಥಾನಗಳು, ಹರಿಯಾಣದ ಎಲ್ಲ 10 ಸ್ಥಾನ, ಜಾರ್ಖಂಡ್ 4, ಜಮ್ಮು-ಕಾಶ್ಮೀರ 1, ದೆಹಲಿಯ ಎಲ್ಲಾ 7 ಸ್ಥಾನ, ಒಡಿಶಾ 6, ಉತ್ತರ ಪ್ರದೇಶ 14 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯಲಿದೆ. ಒಟ್ಟು 889 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಇದ್ದಾರೆ.