ಹಾರ್ದಿಕ್ ಪಾಂಡ್ಯ ವೈಯಕ್ತಿಕ ಜೀವನದಲ್ಲಿ ದೊಡ್ಡ ಸಮಸ್ಯೆಗಳು ಎದುರಾಗಿವೆ. ಹಾರ್ದಿಕ್ ಹಾಗೂ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನ ಶುರುವಾಗಿದೆ. ಹಾರ್ದಿಕ್ ದಂಪತಿ ನಡುವೆ ಮನಸ್ತಾಪವಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇವರಿಬ್ಬರು ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ.
ಇಷ್ಟೇ ಅಲ್ಲ.. ಹಾರ್ದಿಕ್ ಮನೆ ತೊರೆದಿರುವ ನಟಾಶಾ, ಪ್ರತ್ಯೇಕವಾಗಿ ವಾಸಿಸ್ತಿದ್ದಾರೆ ಎಂದ ರೂಮರ್ಸ್ ಕೂಡ ಹಬ್ಬಿದೆ. ನಟಾಶಾ ಸ್ಟಾನ್ಕೋವಿಕ್ ಇತ್ತೀಚಿನ ನಡೆಗಳು ಕೂಡ ಈ ರೂಮರ್ಸ್ ನಿಜ ಎಂಬ ಅರ್ಥವನ್ನ ಕೊಡ್ತಿವೆ.
ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಸಂಬಂಧದ ಬಗ್ಗೆ ಸರಿಯಿಲ್ಲ ಎಂಬ ಊಹಾಪೋಹಗಳಿಂದ ತುಂಬಿತ್ತು. ಇತ್ತೀಚೆಗಷ್ಠ ನತಾಶಾ ಅವರು ತಮ್ಮ ಪತ್ನಿ ಹಾರ್ದಿಕ್ ಪಾಂಡ್ಯ ಅವರ ಹೆಸರನ್ನು ತಮ್ಮ ಇನ್ಸ್ಟಾಗ್ರಾಮ್ ನಿಂದ ಡಿಲೀಟ್ ಮಾಡಿದ್ರು. ಇದರಿಂದ ಈ ಸ್ಟಾರ್ ಜೋಡಿಯ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಊಹಾಪೋಹಗಳು ಹರಡಿದ್ದವು. ಆದರೆ ಈ ವಿಚಾರದ ಬಗ್ಗೆ ದಂಪತಿಗಳು ಯಾವುದೇ ನಿರ್ದಿಷ್ಟ ಉತ್ತರ ನೀಡಿರಲಿಲ್ಲ. ಆದರೆ ಈಗ ಇದಕ್ಕೆ ಉತ್ತರ ಸಿಕ್ಕಿದೆ.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಅವರನ್ನು ಮೇ 2020ರಲ್ಲಿ ವಿವಾಹವಾದರು. ಆದರೆ ಈ ಜೋಡಿ ದೂರ ಉಳಿಯಲಿದ್ದಾರೆ. ಹಾರ್ದಿಕ್ ಪಾಂಡ್ಯ ತಮ್ಮ ಆಸ್ತಿಯಲ್ಲಿ 70% ಭಾಗವನ್ನು ಪತ್ನಿ ನತಾಶಾ ಅವರಿಗೆ ನೀಡಲಿದ್ದಾರೆ ಅನ್ನುವ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಸುದ್ದಿಯಲ್ಲಿ ಎಷ್ಟು ಸತ್ಯ ಇದೆ ಎಂಬುದು ಕಾದುನೋಡಬೇಕಿದೆ.
ಹಾರ್ದಿಕ್ ಮತ್ತು ನತಾಶಾ ಸಂಬಂಧದ ಬಿರುಕು ಮಾರ್ಚ್ 4ರಂದು ಮುನ್ನೆಲೆಗೆ ಬಂದಿತ್ತು. ಆ ದಿನ ನತಾಶಾ ಹುಟ್ಟುಹಬ್ಬವಾಗಿತ್ತು. ಆದರೆ ನತಾಶಾ ಹುಟ್ಟುಹಬ್ಬದಂದು ಅವರ ಪತ್ನಿ ಯಾವ ಪೋಸ್ಟ್ ಮಾಡಿಲ್ಲ. ಅಂದಿನಿಂದ ಇವರಿಬ್ಬರ ಸಂಬಂಧ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನ ಮೂಡಿತ್ತು.