ಅಹಮದಾಬಾದ್: ಗುಜರಾತ್ನ ಅಮೇಲಿ ಜಿಲ್ಲೆಯ ದಾಮ್ನಗರ ನಗರಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರು 3ನೇ ಮಗು ಜನಿಸಿದ್ದಕ್ಕೆ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ. ಅರ್ಥಾತ್ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ.
ಖೀಮಾ ಕಸೋಟಯಾ ಮತ್ತು ಮೇಘನಾ ಬೋಖಾ ಅವರೇ ಅನರ್ಹ ಬಿಜೆಪಿ ಸದಸ್ಯರು. ಇವರು ಅನರ್ಹರಾದರೂ ನಗರಪಾಲಿಕೆ ಬಿಜೆಪಿ ತೆಕ್ಕೆಯಲ್ಲೇ ಇರಲಿದೆ. ಏಕೆಂದರೆ ಅಷ್ಟು ಬಹುಮತ ಬಿಜೆಪಿಗೆ ಇದೆ. 2005-06 ರಲ್ಲಿ ಆಗಿನ ಗುಜರಾತ್ ಮುಖ್ಯ ಮಂತ್ರಿ ನರೇಂದ್ರ ಮೋದಿ 1963ರ ಮುನ್ಸಿಪಲ್ ಕಾಯಿ ದೆಗೆ ತಿದ್ದುಪಡಿ ಮಾಡಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ಯಾವುದೇ ವ್ಯಕ್ತಿ ಪಂಚಾಯತ್, ಪುರಸಭೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಶನ್ ಗಳಿಗೆ ಚುನಾವಣೆ ಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದರು.
- ಗುಜರಾತ್ನಲ್ಲಿ 2005 ರಿಂದ ಜಾರಿಯಲ್ಲಿರುವ ವಿಶಿಷ್ಟ ನಿಯಮ
- 2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಪೌರಾಡಳಿತ ಸದಸ್ಯರಾಗುವಂತಿಲ್ಲ
- 1963ರ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ತಂದಿದ್ದ ನರೇಂದ್ರ ಮೋದಿ
- ಇತ್ತೀಚೆಗೆ ಇಬ್ಬರು ಕಾರ್ಪೊರೇಟರ್ಗಳಿಗೆ ಮೂರನೇ ಮಗು ಜನನ
- ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು: ಡಿಸಿಯಿಂದ ಇಬ್ಬರೂ ವಜಾ