ಮೊನ್ನೆಯಷ್ಟೇ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ತಮ್ಮ ಬಹುನಿರೀಕ್ಷಿತ ಚಿತ್ರ ಡೆವಿಲ್ ರಿಲೀಸ್ ಡೇಟ್ನ ಅಫಿಷಿಯಲ್ಲಾಗಿ ಅನೌನ್ಸ್ ಮಾಡಿದರು. ಡಿಸೆಂಬರ್ ನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಸ್ಪೆಷಲ್ಲಾಗಿ ಡೆವಿಲ್ ಬಿಡುಗಡೆಯಾಗೋದಾಗಿ ಘೋಷಿಸಿದರು. ನಿಮಗೆಲ್ಲ ಗೊತ್ತಿರೋ ಹಾಗೇ ಡೆವಿಲ್ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನ್ಮಾ. ತಾರಕ್ ಡೈರೆಕ್ಟರ್ ಪ್ರಕಾಶ್ ವೀರ್ ಈ ಸಿನ್ಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ಫಿಲ್ಮ್ ಟೀಮ್ ಸಿದ್ದವಾಗಿದೆ. ಕೋಸ್ಟಲ್ವುಡ್ ಬ್ಯೂಟಿ ರಚನಾ ರೈ ದಚ್ಚುಗೆ ನಾಯಕಿಯಾಗಿದ್ದು, ಶೀಘ್ರದಲ್ಲೇ ಚಿತ್ರತಂಡ ಸೇರಿಕೊಳ್ತಿದ್ದಾರೆ. ರಿಲೀಸ್ ಡೇಟ್ ಫೈನಲ್ ಆಗಿರೋದ್ರಿಂದ ಆದಷ್ಟು ಬೇಗ ಶೂಟಿಂಗ್ ಮುಗಿಸೋ ಜವಬ್ದಾರಿ ಡೆವಿಲ್ ಫಿಲ್ಮ್ ಟೀಮ್ ಮೇಲಿದೆ.
ಡೆವಿಲ್ ಅನೌನ್ಸ್ ಆದ ಬೆನ್ನಲ್ಲೇ ಮಾರ್ಟಿನ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸ್ಯಾಂಡಲ್ವುಡ್ ಬೆಂಕಿಚೆಂಡು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಮಾರ್ಟಿನ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿಸಿದ್ದಾರೆ. ಇದೇ ಅಕ್ಟೋಬರ್ 11ರಂದು ದಸರಾ ಹಬ್ಬಕ್ಕೆ ವಿಶೇಷವಾಗಿ ಮಾರ್ಟಿನ್ ತೆರೆಗೆ ಬರುತ್ತಿದೆ. ಅದ್ದೂರಿ ಜೋಡಿಯಲ್ಲಿ ಬರ್ತಿರೋ ಮಾರ್ಟಿನ್ ಮೇಲೆ ನಿರೀಕ್ಷೆ ಮುಗಿಲಿನಷ್ಟಿದೆ. ಟೀಸರ್ನಿಂದಲೇ ಹೊಸ ದಾಖಲೆ ಸೃಷ್ಟಿಸಿರೋ ಮಾರ್ಟಿನ್ ಚಿತ್ರಕ್ಕೆ ಉದಯ್ ಮೆಹ್ತಾ ಬಂಡವಾಳ ಹೂಡಿದ್ದು, ಮೊದಲ 20 ನಿಮಿಷದಲ್ಲೇ ಮಾರ್ಟಿನ್ ಪೈಸಾ ವಸೂಲ್ ಮಾಡುತ್ತೆ ಅಂತೇಳಿದ್ದಾರೆ ಸಂಗೀತ ನಿರ್ದೇಶಕ ರವಿ ಬಸ್ರೂರ್. ಇನ್ನೂ ಮಾರ್ಟಿನ್ ಪಂಚ ಭಾಷೆಯಲ್ಲಿ ತಯಾರಾಗಿದ್ದು, ಸುಮಾರು 250 ದಿನ ಶೂಟಿಂಗ್ ಮಾಡಲಾಗಿದೆ. ಸದ್ಯ ಕನ್ನಡ ವರ್ಷನ್ ರಿರೇಕಾರ್ಡಿಂಗ್ ನಡೀತಿದ್ದು, ಬೇರೆ ಭಾಷೆಯಲ್ಲಿ ಮಾರ್ಟಿನ್ ಡಬ್ಬಿಂಗ್ ಕೆಲಸಗಳು ಭರದಿಂದ ಸಾಗ್ತಿದೆ.
ಇಂಟ್ರೆಸ್ಟಿಂಗ್ ಅಂದರೆ ಕೆಡಿ ಸಿನ್ಮಾ ಟೀಮ್ ಕೂಡ ಸುದ್ದಿಗೋಷ್ಟಿ ಕರೆದಿದೆ. ಕೆಡಿ ಶೋ ಮ್ಯಾನ್ ಪ್ರೇಮ್ ಹಾಗೂ ಬಹದ್ದೂರ್ ಗಂಡು ಧ್ರುವ ಕಾಂಬಿನೇಷನ್ನಲ್ಲಿ ಬರ್ತಿರೋ ಸಿನಿಮಾ. ಇದೇ ಮೊದಲ ಭಾರಿಗೆ ಈ ಕಾಂಬೋ ಜೊತೆಯಾಗಿದ್ದು, ಸಂಜಯ್ ದತ್ತ್, ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಬಿಗ್ಸ್ಟಾರ್ಸ್ಗಳ ಸಮಾಗಮ ಇಲ್ಲಾಗಿದೆ. ಕೆಡಿ ಕೂಡ ಟೈಟಲ್ ಟೀಸರ್ನಿಂದಲೇ ದೊಡ್ಡ ಮಟ್ಟದಲ್ಲಿ ಹವಾ ಎಬ್ಬಿಸಿದೆ. ಕೆಜಿಎಫ್ ನಂತರ ಅಧೀರನ ಆಗಮನ ಆಗಿರೋದ್ರಿಂದ ಬಾಲಿವುಡ್ ಬಾಬಾ ವರ್ಸಸ್ ಬೆಂಕಿ ಚೆಂಡು ಧ್ರುವ ಜುಗಲ್ ಬಂಧಿ ನೋಡೋದಕ್ಕೆ ಕಲಾಭಿಮಾನಿಗಳು ಕಣ್ಣರಳಿಸಿದ್ದಾರೆ. ಇನ್ನೊಂದು ಸ್ಪೆಷಲ್ ಅಂದರೆ ನಾಚ್ ಮೇರಿ ರಾಣಿ ನೋರಾ ಫತ್ಹೇಹಿ ಕೆಡಿ ಕಣದಲ್ಲಿ ಸೊಂಟ ಕುಣಿಸಿರೋದ್ರಿಂದ ಪಡ್ಡೆಹೈಕ್ಳು ಒಂಟಿಕಾಲಲ್ಲಿ ಕೆಡಿನಾ ಬರಮಾಡಿಕೊಳ್ಳೋದಕ್ಕೆ ಕಾಯ್ತಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಯೊಳಗೆ ಕೆಡಿ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆಯಾಗಲಿದೆ