8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಮಾಧಿ ವಿಚಾರ ಮತ್ತೆ ಚರ್ಚೆ ಹುಟ್ಟು ಹಾಕಿದೆ. ಅಂತ್ಯಕ್ರಿಯೆ ಬಳಿಕ ಅರಣ್ಯ ಇಲಾಖೆ ಅರ್ಜುನ ಸಮಾಧಿ ವಿಚಾರವನ್ನು ಮರೆತೇಬಿಟ್ಟಿತ್ತು ಇತ್ತೀಚೆಗೆ ಡಿ ಬಾಸ್ ದರ್ಶನ್ ಈ ಬಗ್ಗೆ ಟ್ವೀಟ್ ಮಾಡಿ, ಸಂಬಂಧಪಟ್ಟವರು ಗಮನ ಹರಿಸುವಂತೆ ಅಧಿಕಾರಿಗಳ ಬಳಿ ಮನವಿಯನ್ನ ಕೂಡ ಮಾಡಿಕೊಂಡಿದ್ರು..
ಮಳೆಗಾಲದ ಸಮಯದಲ್ಲಿ ಅರ್ಜುನನ್ನು ಮುಚ್ಚಿದ್ದ ಮಣ್ಣು ಕೊಚ್ಚಿ ಹೋಗಿ, ಅರ್ಜುನನ ಅವಶೇಷಗಳು ನಾಶವಾಗುವ ಸಾಧ್ಯತೆಗಳಿದ್ರೂ ಕೂಡ ಯಾರು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ದರ್ಶನ್ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು..
ಆನಂತರ ಸ್ಲ್ಯಾಬ್ ಕಲ್ಲುಗಳನ್ನ ಬಳಸಿ ಸಮಾಧಿ ಸುತ್ತಾ ರಕ್ಷಣಾ ಗೋಡೆ ಕಟ್ಟಲು ಸ್ವತಃ ದರ್ಶನ್ ಮತ್ತು ಅವರ ಅಭಿಮಾನಿಗಳು ಮುಂದಾಗಿದ್ದರು. ಡಿ ಬಾಸ್ 30 ಸಾವಿರ ಖರ್ಚು ಮಾಡಿ ಸ್ಲ್ಯಾಬ್ ಕಲ್ಲುಗಳನ್ನ ಕೊಡಿಸಿದ್ದರು. ಅಭಿಮಾನಿಗಳು ಆ ಸ್ಲ್ಯಾಬ್ ಕಲ್ಲುಗಳನ್ನ ಬಳಸಿ ಅರ್ಜುನ ಸಮಾಧಿ ರಕ್ಷಣೆಗೆ ಮುಂದಾಗಿದ್ದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ತಾವೇ ಅರ್ಜುನ ಸಮಾಧಿ ರಕ್ಷಣೆ ಮಾಡುವುದಾಗಿ ಹೇಳಿ ದರ್ಶನ್ ಅಭಿಮಾನಿಗಳನ್ನ ಅಲ್ಲಿಂದ ವಾಪಸ್ ಕಳುಹಿಸಿತ್ತು.
ದರ್ಶನ್ ಕಳುಹಿಸಿಕೊಟ್ಟ ಕಲ್ಲುಗಳನ್ನ ಬಳಸಿ ಅರಣ್ಯ ಇಲಾಖೆಯವರು ಅರ್ಜುನ ಸಮಾಧಿ ಸುತ್ತಾ ತಡೆಗೋಡೆ ನಿರ್ಮಿಸಿದ್ದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ದರ್ಶನ್ ಅವರು ಕಳುಹಿಸಿದ್ದ ಕಲ್ಲುಗಳ ಹಣವನ್ನು ದರ್ಶನ್ ಸ್ನೇಹಿತರ ಅಕೌಂಟ್ಗೆ ಹಾಕಿದ್ದೇವೆ ಎಂದಿದ್ದರು. ಈ ಬಗ್ಗೆ ಈಗ ನಟ ದರ್ಶನ್ ಸ್ನೇಹಿತ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ. ಇಡೀ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಅವರು ಹಣ ಕೊಟ್ಟಿದ್ದು ನನ್ನ ಕೈಗೆ. ನಾನು ಕಲ್ಲು ತೆಗೆದು ಕಳುಹಿಸಿಕೊಟ್ಟೆ. ದರ್ಶನ್ ಅವರ ಅಕೌಂಟ್ಗೂ ದುಡ್ಡು ಬಂದಿಲ್ಲ. ನನ್ನ ಅಕೌಂಟ್ಗೂ ದುಡ್ಡು ಬಂದಿಲ್ಲ. ಆ ದುಡ್ಡಿನ ಅವಶ್ಯಕತೆ ದರ್ಶನ್ ಅವರಿಗೆ ಇಲ್ಲ. ಬೇಕಿದ್ದರೆ ನೀವೇ ಕೇಳಿ ಕೊಡ್ತಾರೆ. ದರ್ಶನ್ ಸರ್ ಸಾಕಷ್ಟು ರೀತಿಯಲ್ಲಿ ಅರಣ್ಯ ಇಲಾಖೆ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಒಳ್ಳೆ ಕೆಲಸ ಮಾಡಲು ಬಂದಾಗ ಅವಮಾನ ಮಾಡಿ ಕಳುಹಿಸಿದ್ದೀರಾ. ನಮ್ಮ ಹುಡುಗರು ಕಷ್ಟಪಟ್ಟಿದ್ದರು. ಕೊನೆಗೆ ಬಂದು ಪೋಸ್ ಕೊಟ್ಟಿದ್ದೀರಾ. ನಿಮಗೆ ಒಳ್ಳೆಯದಾಗಲಿ ಅಂತ ಪ್ರತಿಕ್ರಿಯೆ ಕೊಟ್ಟಿದ್ದಾರೆ