ಮೌಂಟ್ ಎವರೆಸ್ಟ್ನಲ್ಲಿ ಪರ್ವತಾರೋಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಆರೋಪಿಗಳ ಉದ್ದನೆಯ ಸರತಿಯ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಭಾರತದ ಪರ್ವತಾರೋಹಿ ರಾಜನ್ ದ್ವಿವೇದಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೌಂಟ್ ಎವರೆಸ್ಟ್ ಮಂಗಳವಾರ ಪರ್ವತಾರೋಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಬ್ರಿಟಿಷ್ ಪರ್ವತಾರೋಹಿ ಮಾರ್ ಪ್ಯಾಟರ್ಸನ್ ಮತ್ತು ನೇಪಾಳಿ ಶೆರ್ಪಾ ಪಾಸ್ತೆಂಜಿ ಅವರು ಹಿಲರಿ ಹಂತವನ್ನು ಹತ್ತುವಾಗ ಕುಸಿದು ಬಿದ್ದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಮೇ 20 ರಂದು ರಾಜನ್ ದ್ವಿವೇದಿ ಅವರು ಇನ್ ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋ ಅವರ ಹಿಂದೆ ಇರುವ ಆರೋಹಿಗಳ ಗುಂಪಿನ ಚಿತ್ರಣವನ್ನು ತೋರಿಸಿದೆ.
ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ದ್ವಿವೇದಿ ಅವರು ಮೌಂಟ್ ಎವರೆಸ್ಟ್ ಅನ್ನು ಏರುವಾಗ ಎದುರಾಗುವ ಸವಾಲುಗಳ ಬಗ್ಗೆ ಹೇಳಿದ್ದಾರೆ. ಒಂದೇ ಹಗ್ಗವನ್ನು ಹಿಡಿದುಕೊಂಡು ನಾವೆಲ್ಲ ಜೊತೆಯಾಗಿ ಸಾಗುತ್ತಿದ್ದೇವೆ. ಪರ್ವತ ಏರಲು ಇಳಿಯಲು ಟ್ರಾಫಿಕ್ ತೊಂದರೆ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಹವಾಮಾನ. ಆರೋಹಿಗಳ ದೊಡ್ಡ ಸಾಲು ಬರುತ್ತಿರುವುದನ್ನು ನೋಡುವಾಗ ನನಗೆ ಕೆಳಗೆ ಬರುವುದು ಒಂದು ದುಃಸ್ವಪ್ನದಂತೆ ಕಂಡಿತ್ತು. ಹಾಗೆಯೇ ತೀವ್ರವಾಗಿ ದಣಿದಿದ್ದೆ ಎಂದು ಹೇಳಿದ್ದಾರೆ.