- ತನ್ನ ಮಗನನ್ನೇ ಥಳಿಸಿರುವ ಪಾಪಿ ತಾಯಿ
- ಹರಿಯಾಣದ ಫರಿದಾಬಾದ್ನಲ್ಲಿ ನಡೆದ ಘಟನೆ
- ಮಗನಿಗೆ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್
ಹರಿಯಾಣ : ಮಹಿಳೆಯೊಬ್ಬರು ತನ್ನ 11 ವರ್ಷದ ಮಗನನ್ನು ಥಳಿಸಿರುವ ಘಟನೆ ಫರಿದಾಬಾದ್ನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪತಿ ಕೆಲಸದಿಂದ ಸಂಜೆ ಬಂದಾಗ ಸಿಸಿಟಿವಿ ದೃಶ್ಯ ಕಂಡಯ ಬೆಚ್ಚಿ ಬಿದ್ದಿದ್ದಾನೆ. ಇಂತಹ ಕೃತ್ಯಗೈದ ಪತ್ನಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಮಹಿಳೆ ತನ್ನ ಮಗನಿಗೆ ಥಳಿಸುತ್ತಿರುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ತನ್ನ ಮಗನಿಗೆ ಥಳಿಸಿರುವ ಹಲವು ದೃಶ್ಯಗಳನ್ನು ತೋರಿಸಲಾಗಿದೆ. ಮಗನಿಗೆ ಹಲ್ಲೆ ನಡೆಸುತ್ತಿರುವ ವೇಳೆ ಆ ಮಗುವಿನ ತಂದೆ ಬಂದು ಆ ಹುಡುಗನನ್ನು ತನ್ನ ತಾಯಿಯಿಂದ ರಕ್ಷಿಸಿದ ದೃಶ್ಯಾವಳಿಗಳು ಸೆರೆಯಾಗಿದೆ.