ಏನೋ ಇದು ಛೀ ….ವೆಸ್ಟ್ ಕೋಸ್ಟ್ ಪರ್ತ್ನಿಂದ ಮೆಲ್ಬೋರ್ನ್ಗೆ ಸೋಮವಾರ ಸಂಜೆ ಸಂಚರಿಸುತ್ತಿದ್ದ, ವರ್ಜಿನ್ ಆಸ್ಟ್ರೇಲಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬನು ಬೆತ್ತಲೆಯಾಗಿ ಓಡಾಡಿರುವ ವಿಚಿತ್ರ ಘಟನೆ ನಡೆದಿದೆ. ಈ ಹಿನ್ನೆಲೆ ಹಾರಾಟವನ್ನಾ 30 ನಿಮಿಷಗಳಷ್ಟು ವಿಳಂಬವಾಗಿದೆ.
ಪ್ರಯಾಣಿಕನು ಗಗನಸಖಿಯನ್ನು ಕೆಳಗಿಳಿಸಿ ವಿಮಾನವನ್ನು ಅನಿಯಂತ್ರಿತ ಲ್ಯಾಂಡಿಂಗ್ ಮಾಡಲು ಒತ್ತಾಯಿಸಿದ್ದನು. ಹಾಗಾಗಿ ಪ್ಲೈಟ್ನಲ್ಲಿ ಬೆತ್ತಲಾಗಿ ಓಡಾಡಿದ ಪ್ಯಾಸೆಂಜರ್. ನಂತರ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಇಂದು ಆ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ಅರೆಷ್ಟ್ ಮಾಡಿದ್ದಾರೆ. ಪ್ರಯಾಣಿಕನ ಈ ವಿಚಿತ್ರ ವರ್ತನೆಯಿಂದ ವಿಮಾನವು ಪರ್ತ್ ಏರ್ಪೋರ್ಟ್ಗೆ ಹಿಂತಿರುಗುವಂತಾಯಿತು ಎಂದು ಏರ್ಲೈನ್ ತಿಳಿಸಿದೆ.
ಆಸ್ಟ್ರೇಲಿಯನ್ ಫೆಡರಲ್ ಪೋಲೀಸ್ನ ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ್ದು, ಆತ ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬೆತ್ತಲೆಯಾಗಿ ಓಡಿದ್ದು ಮಾತ್ರವಲ್ಲದೆ ವಿಮಾನದ ಸಿಬ್ಬಂದಿಯನ್ನು ನೆಲಕ್ಕೆ ಕೆಡವಿ ಹುಚ್ಚಾಟ ನಡೆಸಿದ್ದನು. ವಿಮಾನವನ್ನು ಮಧ್ಯದಲ್ಲಿಯೇ ಹಿಂತಿರುಗಿಸುವಂತೆ ಒತ್ತಾಯಿಸಿದ್ದನು. ಸದ್ಯ ಅವನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ 14ರಂದು ಪರ್ತ್ ನ್ಯಾಯಾಲಯಕ್ಕೆ ಹಾಜರಾಗುವಂತೆ ಅವನಿಗೆ ಸಮನ್ಸ್ ನೀಡಲು ಪೊಲೀಸರು ಯೋಜಿಸಿದ್ದಾರೆ.