ಈಗೀನ ಯುವ ಪೀಳಿಗೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಎಲ್ಲಾ ರೀತಿಯ ಸಾಹಸಗಳನ್ನ ಮಾಡ್ತಾ ಇರ್ತಾರೆ. ಇದರಿಂದ ಅನೇಕರು ತಮ್ಮ ಪ್ರಾಣ ಕಳೆದುಕೊಂಡ ಉದಾಹರಣೆಗಳು ಇವೆ. ಇಲ್ಲಿ ಒಬ್ಬ ಯುವಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಒಂದು ಸಾಹಸ ಮಾಡಿದ್ದಾನೆ. ಚಲಿಸುವ ಕಾರ್ ನಿಂದ ಡೋರ್ ತೆಗೆದು ಕಾರ್ ನ ಮೇಲೆ ನಿಂತು ಪೋಸ್ ಕೊಟ್ಟಿದ್ದಾನೆ. ಈ ಘಟನೆ ನವಿ ಮುಂಬೈನಲ್ಲಿ ನಡೆದಿದೆ. ಇದರ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.
ಈ ವೈರಲ್ ವಿಡಿಯೋದಲ್ಲಿ ಇದು ಸ್ವಿಫ್ಟ್ ಕಾರ್ ಹಾಗೂ ಇದರ ನಂಬರ್ ಪ್ಲೇಟ್ ರಾಜಸ್ತಾನ್ ಮೂಲದು ಎಂದು ತಿಳಿದು ಬಂದಿದೆ. ಸದ್ಯ ಸಾರ್ವಜನಿಕರು ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತಗೆದು ಕೊಳ್ಳುವುದಾಗಿ ಪೊಲೀಸರಿಗೆ ಕಾಮೆಂಟ್ ಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ. ವಿಡಿಯೋದಲ್ಲಿ ಇರುವ ವ್ಯಕ್ತಿಯ ಬಂದನ ಆಗಿರುವುದಾಗಿ ಮಾಹಿತಿ ಇದೆ. ಆದ್ರೆ ಇದರ ಬಗ್ಗೆ ಅಧಿಕೃತ ಮಹಿತಿ ಇಲ್ಲ.