- ರಸೂಲ್ ರೌಡಿಶೀಟರ್ ಮೇಲೆ ಮಾಡಿದ ಸಿಪಿಐ ಸಂತೋಷ್
- ಬೀದರ್ನ ಸಾಯಿ ಸ್ಕೂಲ್ ಆವರಣದ ಬಳಿ ಘಟನೆ
ಬೀದರ್ನಲ್ಲಿ ರಾತ್ರೋರಾತ್ರಿ ಗುಂಡಿನ ಶಬ್ದ ಕೇಳಿ ಬಂದಿದೆ. ರಸೂಲ್ ರೌಡಿಶೀಟರ್ ಮೇಲೆ ಸಿಪಿಐ ಸಂತೋಷ್ ಫೈರಿಂಗ್ ಮಾಡಿದ್ದಾರೆ. ಬೀದರ್ನ ಹೃದಯ ಭಾಗದಲ್ಲಿರುವ ಸಾಯಿ ಸ್ಕೂಲ್ ಆವರಣದ ಬಳಿ ಘಟನೆ ನಡೆದಿದೆ.
ಮಾರಕ ಖಾಯಿಲೆಯಿಂದ ಬಳಲುತ್ತಿದ್ದ ರೌಡಿಶೀಟರ್ ರಸೂಲ್ನನ್ನು ನ್ಯೂಟೌನ್ ಪೊಲೀಸ್ ಠಾಣೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಸಿಪಿಐ ಕೈಗೆ ಚಾಕುವಿನಿಂದ ಇರಿದಿದ್ದಾನೆ. ಸಿಪಿಐ ವಾರ್ನಿಂಗ್ ಮಾಡಿದ್ರೂ ರೌಡಿಶೀಟರ್ ಚಾಕು ತೆಗೆದು ಕೈಗೆ ಇರಿದಿದ್ದಾನೆ. ಚಾಕು ಒರಿತದ ಬಳಿಕ ಆತ್ಮರಕ್ಷಣೆಗಾಗಿ ಸಿಪಿಐ ರಸೂಲ್ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.